ಕದಂಬೇಶ್ವರ ದೇವಸ್ಥಾನವು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲ್ಲೂಕಿನಲ್ಲಿರುವ ರಟ್ಟಿಹಳ್ಳಿ ಎಂಬ ಹಳ್ಳಿಯಲ್ಲಿರುವ ದೇವಾಲಯವಾಗಿದೆ. ಕುಮುದ್ವತಿ ನದಿಯ ದಂಡೆಯ ಮೇಲಿರುವ ಶಿವನಿಗೆ ಸಮರ್ಪಿತವಾಗಿರುವ ಕದಂಬೇಶ್ವರ ದೇವಾಲಯವಾಗಿದೆ. ಈ ದೇವಾಲಯವು 11ನೇ ಶತಮಾನದ ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪದ ಒಂದು ರತ್ನವಾಗಿದೆ.
ಈ ದೇವಾಲಯವು ಬೆಂಗಳೂರಿನಿಂದ ಸುಮಾರು 326 ಕಿ.ಮೀ ಮತ್ತು ಹುಬ್ಬಳಿಯಿಂದ 134 ಕಿ.ಮೀ ದೂರದಲ್ಲಿದೆ. ಹಾಗೂ ಹಾವೇರಿ ನಗರದಿಂದ 58 ಕಿ.ಮೀ ಮತ್ತು ಹರಿಹರ ರೈಲ್ವೆ ನಿಲ್ದಾಣದಿಂದ 49 ಕಿ.ಮೀ ದೂರದಲ್ಲಿದೆ.
ಇತಿಹಾಸ
ಕದಂಬೇಶ್ವರ ದೇವಾಲಯವು ಕ್ರಿ.ಶ. 11ನೆಯ ಶತಮಾನದಲ್ಲಿ ಪೂರ್ವಾಭಿಮುಖವಾಗಿ ನಿರ್ಮಿತಗೊಂಡ ಸುಂದರ ತ್ರಿಕೂಟಾಚಲವಾಗಿದೆ. ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪದ ಪ್ರಮುಖ ದೇವಾಲಯಗಳಲ್ಲಿ ಇದು ಒಂದು, ಶಾಸನಗಳು ಈ ದೇವಾಲಯವನ್ನು ಕಡಂಬೇಶ್ವರ ಎಂದು ಉಲ್ಲೇಖಿಸುತ್ತವೆ.
ತಲವಿನ್ಯಾಸದಲ್ಲಿ ಮೂರು ಗರ್ಭಗೃಹಗಳು, ಮೂರು ಅಂತರಾಳಗಳಗೆ ಹೊಂದಿಕೊಂಡ ವಿಶಾಲವಾದ ನವರಂಗ ಹಾಗೂ ಮುಂಭಾಗದಲ್ಲಿ ಕಂಬಗಳಿಂದ ಅಲಂಕೃತವಾಗಿರುವ ತೆರೆದ ಸಭಾಮಂಟಪ ಇದೆ. ಮುಖ್ಯ ಗರ್ಭಗೃಹದ ಬಾಗಿಲವಾಡವು ಪಂಚಶಾಖಾಲಂಕೃತವಾಗಿದೆ. ಬಾಗಿಲವಾಡದ ತಲೆಯ ಭಾಗದಲ್ಲಿ ತಲೆಕೆಳಗಾದ ತಾವರೆ ಮೊಗ್ಗಿನಕಾರದ ಅಲಂಕರಣೆಯಿದೆ. ಕಮಾನಿನ ಆಕಾರದಲ್ಲಿರುವ ಲಲಾಟದಲ್ಲ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ಗರ್ಭಗೃಹದ ಒಳಗಡೆ ಕಲ್ಯಾಣ ಚಾಲುಕ್ಯ ಶೈಅಯ ಪಾಣಿಪೀಠದ ಮೇಲೆ ಶಿವಲಿಂಗವಿದೆ. ಅಂತರಾಳದ ಬಾಗಿಲುವಾಡದಲ್ಲಿಯೂ ಸಹ ಪಂಚಶಾಖೆಯ ಅಲಂಕರಣವಿದೆ. ಬಾಗಿಲ ಇಕ್ಕೆಲಗಳಲ್ಲಿ ತಾಲುದ್ರಗಳವೆ. ಅಲಂಕೃತ ಬಾಗಿಲುವಾಡುಗಳನ್ನು ಹೊಂದಿರುವ ಉದ ಎರಡು ಗರ್ಭಗೃಹಗಳಲ್ಲಿ ಶಿವಅಂಗಗಳಿವೆ.
ನವರಂಗದ ಮಧ್ಯದಲ್ಲಿರುವ ನಾಲ್ಕು ಬೃಹದಾಕಾರದ ಕಂಬಗಳು ಕಲ್ಯಾಣ ಚಾಲುಕ್ಯ ಶೈಲಿಯಲ್ಲವೆ. ನವರಂಗದ ಪೂರ್ವ ಭಾಗದಲ್ಲಿರುವ ಪ್ರವೇಶದ್ವಾರದ ಬಳಿ ನಂದಿಯ ಏಕಶಿಲಾ ವಿಗ್ರಹವಿದೆ. 24 ಕಂಬಗಳಿಂದ ಕೂಡಿರುವ ವಿಶಾಲವಾದ ಸಭಾಮಂಟಪಕ್ಕೆ ಪ್ರತ್ಯೇಕ ಮುಖಮಂಟಪ ಹೊಂದಿರುವ ಮೂರು ಪ್ರವೇಶದ್ವಾರಗಳವೆ. ನವರಂಗದ ಪ್ರವೇಶದ್ವಾರದ ತಲೆಯ ಭಾಗದಲ್ಲಿ ಚಾಮರಧಾರಿ ಸುಂದರಿಯರು, ಗಣೇಶ, ನಾಟ್ಯಶಿವ, ವಿಷ್ಣು, ಮಹಿಷಮರ್ದಿನಿ ಮುಂತಾದ ಉಬ್ದುಶಿಲ್ಪಗಳನ್ನು ಕೆತ್ತಲಾಗಿದೆ. ನವರಂಗದ ಬಾಗಿಲುವಾಡದ ಇಕ್ಕೆಲಗಳಲ್ಲರುವ ದ್ವಾರಪಾಲಕರ ದೊಡ್ಡ ಶಿಲ್ಪಗಳು ಸುಂದರವಾಗಿವೆ. ನವರಂಗದಲ್ಲಿರುವ ಎರಡು ದೇವಕೋಷ್ಠಗಳಲ್ಲಿ ಗಣಪತಿ ಮತ್ತು ದುರ್ಗೆಯ ಶಿಲ್ಪಗಳವೆ. ಮೂರು ಗರ್ಭಗೃಹಗಳ ಮೇಲೆ ಸುಖನಾಸ ಮತ್ತು ತಲ ದ್ರಾವಿಡ ಶೈಲಯ ಶಿಖರಗಳವೆ, ಇವುಗಳಲ್ಲಿ ಬಲಭಾಗದ ಶಿಖರದಲ್ಲ ವಿವಿಧ ಭಂಗಿಯಲ್ಲರುವ ನಟರಾಜ, ಆಸೀನ ಶಿವ, ಚತುರ್ಭುಜ ಶಿವ, ಭೈರವ, ಮುಂತಾದ ದೇವತೆಗಳ ಕಿರು ಶಿಲ್ಪಗಳವೆ.
ಭೇಟಿ ನೀಡಿ













