ಪುರಾತನ ಶ್ರೀ ಸೋಮೇಶ್ವರನ ದೇವಸ್ಥಾನ ಕುರುಡುಮಲೆ

ಪುರಾತನ ಶ್ರೀ ಸೋಮೇಶ್ವರನ ದೇವಸ್ಥಾನ ಕುರುಡುಮಲೆಯು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆ ಮುಳುಬಾಗಿಲು ತಾಲೂಕು ಕುರುಡುಮಲೆ ಗ್ರಾಮದಲ್ಲಿ ಇರುವ ಐತಿಹಾಸಿಕ ಪುರಾತನ ದೇವಾಲಯವಾಗಿದೆ. ಈ ಊರು ಚೋಳ ರಾಜನ ಕಾಲದ ಶಿಲ್ಪಕಲೆಯುಳ್ಳ ದೇವಸ್ಥಾನಗಳಿಗೆ ಮನೆಯಾಗಿದೆ. ಯಾವುದೇ ಅಡಿಪಾಯವಿಲ್ಲದೆ ಬಂಡೆಯ ಮೇಲೆ ನಿರ್ಮಿಸಲ್ಪಟ್ಟ 1300 ವರ್ಷದ ಹಳೆಯ ಚೋಳರ ದೇವಸ್ಥಾನ ಕುರುಡುಮಲೆ ಶ್ರೀ ಪ್ರಸನ್ನ ಸೋಮೇಶ್ವರ ದೇವಸ್ಥಾನ ದೇವಾಲಯವಾಗಿದೆ. ಈ ದೇವಾಲಯದ ಆವರಣದ ಎಡ ಭಾಗದಲ್ಲಿ ಕ್ಷಮದಾಂಬ ದೇವಿಯ ದೇವಾಲಯ ಸಹ ಕಾಣಬಹುದು.

ಈ ದೇವಾಲಯವು ಬೆಂಗಳೂರಿಂದ 105 ಕಿ.ಮೀ ಮತ್ತು ಕೋಲಾರದಿಂದ 35 ಕಿ.ಮೀ ದೂರದಲ್ಲಿದೆ. ಹಾಗೂ ಮುಳುಬಾಗಿಲು ತಾಲೂಕುನಿಂದ 11 ಕಿ.ಮೀ ಮತ್ತು ಕೋಲಾರ ರೈಲ್ವೆ ನಿಲ್ದಾಣದಿಂದ 35 ಕಿ.ಮೀ ದೂರದಲ್ಲಿದೆ.

ಇತಿಹಾಸ

ಸೋಮೇಶ್ವರ ವಿಗ್ರಹವನ್ನು ಕೌಂಡಿನ್ಯ ಮಹರ್ಷಿಗಳು ಸ್ಥಾಪಿಸಿದರು ಮತ್ತು ಈ ದೇವಾಲಯಕ್ಕೆ ಭೇಟಿ ನೀಡುವುದು ಕಾಶಿಗೆ ಭೇಟಿ ನೀಡಿದ ಸಮಾನವೆಂದು ನಂಬಲಾಗಿದೆ. ಸುಮಾರು 1300 ವರ್ಷಗಳ ಹಿಂದೆ (7 ಶತಮಾನ) ಚೋಳ ಸಾಮ್ರಾಜ್ಯದ ಅವಧಿಯಲ್ಲಿ ಜಕಣಾಚಾರಿ ಎಂದು ಕರೆಯಲ್ಪಡುವ ಪ್ರಸಿದ್ಧ ಶಿಲ್ಪಿಯಿಂದ ದೇವಾಲಯದ ರಚನೆಯನ್ನು ನಿರ್ಮಿಸಲಾಯಿತು. ದೇವಾಲಯದ ನಿರ್ಮಾಣವನ್ನು ಮಧ್ಯದಲ್ಲಿ ನಿಲ್ಲಿಸಲಾಯಿತು ನಂತರ ಅವರ ಮಗ ಡಂಕಣಾಚಾರಿ ಪೂರ್ಣಗೊಳಿಸಿದರು. ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ ಮತ್ತು ದೇವಾಲಯದ ರಚನೆಯ ಮೇಲಿನ ಕೆತ್ತನೆಗಳು ಬಹಳ ಸುಂದರವಾಗಿವೆ. ಸುತ್ತಮುತ್ತ 15ರಿಂದ 20ಕ್ಕೂ ಹೆಚ್ಚು ದೇವಸ್ಥಾನಗಳಿದ್ದರೂ ನಾಶವಾಗಿವೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುರಾವೆಯಾಗಿ ಸೋಮೇಶ್ವರ ದೇವಾಲಯದ ಆವರಣದ ಪಕ್ಕದಲ್ಲಿ 2 ದೇವಾಲಯ ರಚನೆಗಳು ನಾಶವಾಗಿರುವುದನ್ನು ನಾವು ನೋಡುತ್ತೇವೆ. ಸುತ್ತಮುತ್ತಲಿನ ಅನೇಕ ವಿಗ್ರಹಗಳನ್ನು ಈಗ ಸೋಮೇಶ್ವರ ದೇವಸ್ಥಾನದಲ್ಲಿ ಇರಿಸಲಾಗಿದೆ.

ಭೇಟಿ ನೀಡಿ
ಮುಳಬಾಗಲು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಕೋಲಾರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section