ಬೇತಮಂಗಲ ಅಣೆಕಟ್ಟು ಕರ್ನಾಟಕ ರಾಜ್ಯದ ಕೋಲಾರದ ಜಿಲ್ಲೆಯ ಕೆಜಿಎಫ್ ತಾಲೂಕು ಬೇತಮಂಗಲ ಗ್ರಾಮದಲ್ಲಿ ಪಾಲಾರ್ ನದಿಗೆ ಅಡ್ಡಲಾಗಿ ಕಟ್ಟಿರುವ ಆಣೆಕಟ್ಟು ಆಗಿದೆ. ಈ ಅಣೆಕಟ್ಟಿನ ಮೂಲ ಉದ್ದೇಶ ಅಂದಿನ ಕಾಲದಲ್ಲಿ ಕೆಜಿಎಫ್ ಪ್ರದೇಶಕ್ಕೆ ನೀರು ಸರಬರಾಜು ಮಾಡಲು ನಿರ್ಮಿಸಿದ ಮಾನವ ನಿರ್ಮಿತ ಆಣೆಕಟ್ಟು ಆಗಿದೆ.
ಈ ಆಣೆಕಟ್ಟು ಬೆಂಗಳೂರಿಂದ 97 ಕಿ.ಮೀ ಮತ್ತು ಕೋಲಾರದಿಂದ 30 ಕಿ.ಮೀ ದೂರದಲ್ಲಿದೆ. ಹಾಗೂ ಕೆಜಿಎಫ್ ನಿಂದ 13 ಕಿ.ಮೀ ದೂರದಲ್ಲಿದೆ.
ಈ ಅಣೆಕಟ್ಟನ್ನು 1903 – 04 ಅಲ್ಲಿ ಅಂದಿನದ ಬ್ರಿಟಿಷ್ ಸರ್ಕಾರವು ನಿರ್ಮಿಸಿತು.
ಪಾಲಾರ್ ನದಿ
ಪಾಲಾರ್ ನದಿ ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲೊಂದಾಗಿದೆ. ಈ ನದಿ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ನಂದಿ ಬೆಟ್ಟಗಳಲ್ಲಿ ಉಗಮವಾಗಿ ಪಶ್ಚಿಮದಿಂದ ಪೂರ್ವದತ್ತ ಹರಿಯುತ್ತದೆ. ನದಿ ಸುಮಾರು 93 ಕಿಲೋಮೀಟರ್ ದೂರವನ್ನು ಕರ್ನಾಟಕದೊಳಗೆ, 33 ಕಿಲೋಮೀಟರ್ ಅನ್ನು ಆಂಧ್ರ ಪ್ರದೇಶದೊಳಗೆ ಮತ್ತು ನಂತರ 222 ಕಿಲೋಮೀಟರ್ ತಮಿಳುನಾಡಿನಲ್ಲಿ ಹರಿದು, ಚೆನ್ನೈನಿಂದ ಸುಮಾರು 100 ಕಿಲೋಮೀಟರ್ ದಕ್ಷಿಣದ ವಯಲೂರು ಸಮೀಪದಲ್ಲಿ ಬಂಗಾಳ ಕೊಲ್ಲಿಗೆ ಸೇರುತ್ತದೆ.
ಭೇಟಿ ನೀಡಿ









