ಕೋಟಿಲಿಂಗೇಶ್ವರ ದೇವಸ್ಥಾನ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಕೆ ಜಿ ಎಫ್ ತಾಲೂಕಿನಲ್ಲಿ ಕಮ್ಮಸಂದ್ರ ಎಂಬ ಗ್ರಾಮದಲ್ಲಿ ಇರುವ ಪವಿತ್ರ ಪುಣ್ಯಕ್ಷೇತ್ರ ಕೋಟಿಲಿಂಗಗಳ ಸ್ಥಳವಾಗಿದೆ. ಇಲ್ಲಿ ಪ್ರಧಾನ ದೇವರು ಶಿವ. 108 ಅಡಿ ಎತ್ತರದ ಶಿವಲಿಂಗದ ಜೊತೆಗೆ ಮತ್ತು 35 ಅಡಿ (11 ಮೀ) ಎತ್ತರದ ಬೃಹತ್ ನಂದಿ ವಿಗ್ರಹ ಇದೆ. ಸ್ವಾಮಿ ಸಾಂಬಶಿವಮೂರ್ತಿಯವರು 1980 ರಲ್ಲಿ ಈ ದೇವಾಲಯವನ್ನು ನಿರ್ಮಿಸಿದರು. ಇಲ್ಲಿ ಇರುವ ಲಕ್ಷಾಂತರ ಶಿವಲಿಂಗಗಳು, ಬೃಹತ್ ನಂದಿ ವಿಗ್ರಹವು ಅನೇಕ ಪ್ರವಾಸಿಗರು ಮತ್ತು ಭಕ್ತರ ಗಮನ ಸೆಳೆಯುತ್ತದೆ.
ಈ ದೇವಾಲಯವು ಬೆಂಗಳೂರಿಂದ 96 ಕಿ.ಮೀ ಮತ್ತು ಕೋಲಾರದಿಂದ 29 ಕಿ.ಮೀ ದೂರದಲ್ಲಿದೆ. ಹಾಗೂ ಕೆ ಜಿ ಎಫ್ 8 ಕಿ.ಮೀ ಮತ್ತು ಬಂಗಾರಪೇಟೆ ರೈಲ್ವೆ ನಿಲ್ದಾಣದಿಂದ 13 ಕಿ.ಮೀ ದೂರದಲ್ಲಿದೆ.
ಮುಖ್ಯ ದೇವಾಲಯದೊಳಗೆ ವಿವಿಧ ದೇವತೆಗಳನ್ನು ಹೊಂದಿರುವ ಇತರ 11 ದೇವಾಲಯಗಳಿವೆ. ಪ್ರಧಾನ ದೇವರು ಬ್ರಹ್ಮ, ಮಹಾವಿಷ್ಣು, ಆಂಜನೇಯಸ್ವಾಮಿ ಮತ್ತು ದೇವಿ ಅನ್ನಪೂರ್ಣರನ್ನು ಒಂದೇ ದೇವಾಲಯದ ವಿವಿಧ ಉಪ ದೇವಾಲಯಗಳಲ್ಲಿ ಇರಿಸಲಾಗಿದೆ. ದೇವಾಲಯದ ಹೆಸರು ಇಲ್ಲಿ 1 ಕೋಟಿ ಶಿವಲಿಂಗ ಇರಬೇಕೆಂದು ಸ್ಪಷ್ಟವಾಗಿ ಸೂಚಿಸುತ್ತದೆ ಮತ್ತು 2023 ರ ಹೊತ್ತಿಗೆ ಇಲ್ಲಿಯವರೆಗೆ ಇಲ್ಲಿ 95 ಲಕ್ಷಕ್ಕೂ ಹೆಚ್ಚು ಶಿವಲಿಂಗಗಳನ್ನು ಸ್ಥಾಪಿಸಲಾಗಿದೆ.
ಇಲ್ಲಿ ಭಕ್ತರಿಗೆ ಸ್ಥಳಾವಕಾಶ ಕಲ್ಪಿಸುವ ಒಂದು ದೊಡ್ಡ ಧ್ಯಾನ ಮಂದಿರವಿದೆ. ಪ್ರತಿ ವಾರ ಸುಮಾರು 20 ರಿಂದ 25 ಮದುವೆಗಳು ಇಲ್ಲಿ ನಡೆಯುತ್ತವೆ ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ ಈ ದೇವಾಲಯವು ಸಾಮೂಹಿಕ ವಿವಾಹಗಳಿಗೆ ಹೆಸರುವಾಸಿಯಾಗಿದೆ. ಪೂಜಾ ಸಮಯಗಳಲ್ಲಿ ಪುರೋಹಿತರ ನಿಯಮಿತ ಮಂತ್ರಗಳ ಜೊತೆಗೆ, ಸಂಗೀತ ಮತ್ತು ಡ್ರಮ್ ವಾದನವು ಇಲ್ಲಿ ಮತ್ತೊಂದು ವೈಶಿಷ್ಟ್ಯವಾಗಿದೆ. ಅನೇಕ ಭಕ್ತರು ನಿಗದಿತ ಮೊತ್ತವನ್ನು ಪಾವತಿಸಿ ಲಿಂಗವನ್ನು ಸ್ಥಾಪಿಸಿ ಅದರಲ್ಲಿ ತಮ್ಮ ಹೆಸರುಗಳನ್ನು ಕೆತ್ತುತ್ತಾರೆ.
ಪ್ರವಾಸಿಗರು ಮತ್ತು ಭಕ್ತರ ಅನುಕೂಲಕ್ಕಾಗಿ ಇಲ್ಲಿ ಹಲವಾರು ಪಾವತಿಸಿದ ಕುಟೀರಗಳಿವೆ. ದೇವಾಲಯವು ಪ್ರವೇಶ ಮತ್ತು ಕ್ಯಾಮೆರಾಗಳು ಇತ್ಯಾದಿಗಳಿಗೆ ಪ್ರತಿ ವ್ಯಕ್ತಿಗೆ Rs. 20/- ರಷ್ಟು ಸಣ್ಣ ಶುಲ್ಕವನ್ನು ವಿಧಿಸುತ್ತದೆ. ಮಹಾಶಿವರಾತ್ರಿ ಮತ್ತು ಇತರ ಶುಭ ದಿನಗಳಲ್ಲಿ ದೇವಾಲಯವು ಜನದಟ್ಟಣೆಯಿಂದ ಕೂಡಿರುತ್ತದೆ. ಭಕ್ತರಿಗೆ ಉಚಿತ ಊಟ ಮತ್ತು ಅನ್ನದಾನವನ್ನು ಮಾಡಲಾಗುತ್ತದೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು ಸರ್ಕಾರ ಇದನ್ನು ಪ್ರವಾಸಿ ತಾಣವೆಂದು ಘೋಷಿಸಿದೆ. ಆದ್ದರಿಂದ ಕರ್ನಾಟಕ ಮತ್ತು ಇತರ ರಾಜ್ಯಗಳಿಂದ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಪ್ರವಾಸಿಗರು ಕೋಟಿಲಿಂಗೇಶ್ವರ ದೇವಾಲಯವನ್ನು ನೋಡಲು ಇಲ್ಲಿಗೆ ಬರುತ್ತಾರೆ.
ಭೇಟಿ ನೀಡಿ








