ಶ್ರೀ ಚೆನ್ನಕೇಶವ ದೇವಸ್ಥಾನ ಕುರುಡುಮಲೆ

ಶ್ರೀ ಚೆನ್ನಕೇಶವ ದೇವಸ್ಥಾನ ಕುರುಡುಮಲೆಯು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆ ಮುಳುಬಾಗಿಲು ತಾಲೂಕು ಕುರುಡುಮಲೆ ಗ್ರಾಮದಲ್ಲಿ ಇರುವ ದೇವಾಲಯವಾಗಿದೆ. ಈ ದೇವಾಲಯದ ವಿಶೇಷತೆ ಏನೆಂದರೆ ಹೊರಾಂಗಣವು ಕೃಷ್ಣದೇವರಾಯನ ಕಾಲದಲ್ಲಿ ಮತ್ತು ಗರ್ಭಗುಡಿಯು ಚೋಳರ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯವಾಗಿದೆ.

ಈ ದೇವಾಲಯವು ಬೆಂಗಳೂರಿಂದ 105 ಕಿ.ಮೀ ಮತ್ತು ಕೋಲಾರದಿಂದ 35 ಕಿ.ಮೀ ದೂರದಲ್ಲಿದೆ. ಹಾಗೂ ಮುಳುಬಾಗಿಲು ತಾಲೂಕುನಿಂದ 11 ಕಿ.ಮೀ ಮತ್ತು ಕೋಲಾರ ರೈಲ್ವೆ ನಿಲ್ದಾಣದಿಂದ 35 ಕಿ.ಮೀ ದೂರದಲ್ಲಿದೆ.

ಈ ದೇವಾಲಯವು 2000 ವರ್ಷಗಳ ಇತಿಹಾಸವನ್ನು ಹೊಂದಿದ್ದು, 736 ವರ್ಷಗಳ ಹಿಂದೆ ಈ ದೇವಾಲಯವು ಶಿಥಿಲಾವಸ್ಥೆಯಲ್ಲಿತ್ತು. ನಂತರ ಈ ದೇವಾಲಯವನ್ನು 13 ಮೇ 2022 ರಂದು ದೇವಾಲಯವನ್ನು ಅದರ ಮೂಲ ಸ್ಥಿತಿಗೆ ನವೀಕರಿಸಲಾಗಿದೆ.

ಭೇಟಿ ನೀಡಿ
ಮುಳಬಾಗಲು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಕೋಲಾರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section