ಶ್ರೀ ಅವನಿ ಶೃಂಗೇರಿ ಶಂಕರ ಮಠವು ಶ್ರೀಮಂತ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಹೊಂದಿದೆ ಮತ್ತು ಹಲವಾರು ಶತಮಾನಗಳಿಂದ ಅಸ್ತಿತ್ವದಲ್ಲಿದ್ದ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಈ ಸ್ಥಳವು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅವನಿ ಎಂಬ ಗ್ರಾಮದಲ್ಲಿ ಇದೆ.
ಈ ಮಠವು ಬೆಂಗಳೂರಿಂದ 93 ಕಿ.ಮೀ ಮತ್ತು ಕೋಲಾರದಿಂದ 30 ಕಿ.ಮೀ ದೂರದಲ್ಲಿದೆ. ಹಾಗೂ ಮುಳುಬಾಗಿಲುನಿಂದ 14 ಕಿ.ಮೀ ಮತ್ತು ಕೋಲಾರದ ಕನಕನಪಾಳ್ಯ ರೈಲ್ವೆ ನಿಲ್ದಾಣದಿಂದ 30 ಕಿ.ಮೀ ದೂರದಲ್ಲಿದೆ.
ಆದಿ ಶಂಕರರು ಸ್ಥಾಪಿಸಿರುವ ಶೃಂಗೇರಿ ಪೀಠದ ಜಗದ್ಗುರುಳಾದ 4ನೇ ನೃಸಿಂಹಭಾರತಿಯವರು ಸಂಪ್ರದಾಯದ ಪ್ರಕಾರ, ಸಂಚಾರದಲ್ಲಿದ್ದಾಗ ಕೆಲದಿನ ಕೋಲಾರದಲ್ಲಿ ತಂಗಿದ್ದರಂತೆ. ಆಗ ಅವರಿಗೆ ನಿಂತ ಭಂಗಿಯಲ್ಲಿರುವ ಶಾರದಾ ಮಾತೆಯ ಮೂರ್ತಿ ಸಿಕ್ಕಿತಂತೆ. ಸ್ಥಳಮಹಿಮೆಯನ್ನರಿತ ಶ್ರೀಗಳು ಅದನ್ನು ಅಲ್ಲೇ ಪ್ರತಿಷ್ಠಾಪಿಸಿ ಶಾಖಾ ಮಠವೊಂದರ ಸ್ಥಾಪನೆಗೆ ಕಾರಣರಾದರೆಂದು ಹೇಳಲಾಗುತ್ತದೆ. ಮತ್ತು ಅವರ ಶಿಷ್ಯರಲ್ಲಿ ಒಬ್ಬರಿಗೆ ಉಸ್ತುವಾರಿ ವಹಿಸಲಾಯಿತು. ಮಠದ ಮುಖ್ಯಸ್ಥರನ್ನು ಅವನಿ ಶೃಂಗೇರಿ ಸ್ವಾಮಿ ಎಂದು ಕರೆಯಲಾಗುತ್ತದೆ.
ಭೇಟಿ ನೀಡಿ



