ಬೃಂದಾವನ ಉದ್ಯಾನ

ಬೃಂದಾವನ ಉದ್ಯಾನವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇರುವ ಒಂದು ಉದ್ಯಾನವನ. ಇದು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೃಷ್ಣರಾಜಸಾಗರ ಅಣೆಕಟ್ಟಿನ (KRS Dam) ಪಕ್ಕದಲ್ಲಿದೆ. ಬೃಂದಾವನವೂ ಅರವತ್ತು ಎಕರೆ ಪ್ರದೇಶದಲ್ಲಿದೆ. ಈ ಉದ್ಯಾನವನದ ಕೆಲಸ 1927-1932 ರ ಅವಧಿಯಲ್ಲಿ ಸರ್ ಎಮ್ ವಿಶ್ವೇಶ್ವರಯ್ಯನವರ ಯೋಜನೆಯಂತೆ ನಿರ್ಮಿಸಿದರು. ಈ ಉದ್ಯಾನವು ಶ್ರೀರಂಗಪಟ್ಟಣದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಈ ಉದ್ಯಾವನವು ಬೆಂಗಳೂರಿನಿಂದ ಸುಮಾರು 148 ಕಿ.ಮೀ ಮತ್ತು ಮಂಡ್ಯ ದಿಂದ 44 ಕಿ.ಮೀ ದೂರದಲ್ಲಿದೆ. ಹಾಗೂ ಮೈಸೂರು ನಗರದಿಂದ ಕೇವಲ 20 ಕಿ.ಮೀ ಮತ್ತು ಮೈಸೂರು ನಗರ ರೈಲ್ವೆ ನಿಲ್ದಾಣದಿಂದ 19 ಕಿ.ಮೀ ದೂರದಲ್ಲಿದೆ.

ಈ ಉದ್ಯಾನವು ಸಮಯ ಬೆಳ್ಳಿಗ್ಗೆ 07:00 AM ರಿಂದ ರಾತ್ರಿ 08:00 PM ರವರೆಗೆ ತೆರೆದಿರುತ್ತದೆ.

ಉದ್ಯಾನವು ಸಾರ್ವಜನಿಕರಿಗೆ ತೆರೆದಿರುತ್ತದೆ ಮತ್ತು ಪ್ರವೇಶ ಶುಲ್ಕವನ್ನು ವಿಧಿಸಲಾಗುತ್ತದೆ. ಉದ್ಯಾನವನ್ನು ಕರ್ನಾಟಕ ಸರ್ಕಾರದ ಉದ್ಯಮವಾದ ಕಾವೇರಿ ನೀರಾವರಿ ನಿಗಮ ನಿರ್ವಹಿಸುತ್ತದೆ. ಉದ್ಯಾನವು ಸಸ್ಯಾಲಂಕರಣದ ಕೆಲಸಗಳನ್ನು (ಪೊದೆಗಳನ್ನು ಕತ್ತರಿಸುವ ಮೂಲಕ ರಚಿಸಲಾದ ಪ್ರಾಣಿಗಳ ಶಿಲ್ಪಗಳು), ಪೆರ್ಗೊಲಾಸ್ (ಬಳ್ಳಿಗಳಿಂದ ಆವೃತವಾದ ಮಬ್ಬಾದ ಹಾದಿ) ಹೊಂದಿದೆ.

ಬೃಂದಾವನ ಉದ್ಯಾನದ ಪ್ರವೇಶ ಶುಲ್ಕ ವಯಸ್ಕರಿಗೆ ಪ್ರತಿ ವ್ಯಕ್ತಿಗೆ Rs.15/- ಮತ್ತು ಮಕ್ಕಳಿಗೆ ಪ್ರತಿ ವ್ಯಕ್ತಿಗೆ Rs.5/- (ವಯಸ್ಸು: 5-10 ವರ್ಷಗಳು) ಇರುತ್ತದೆ.

ಬೃಂದಾವನ ಗಾರ್ಡನ್‌ನಲ್ಲಿ ಬೆಳಕಿನ ಸಮಯ

ಬೃಂದಾವನ ಗಾರ್ಡನ್‌ನಲ್ಲಿ ಪ್ರತಿದಿನ ಸಂಜೆ 7:00 ರಿಂದ 8:00 ರವರೆಗೆ ದೀಪಾಲಂಕಾರ ಇರುತ್ತದೆ.

ಬೃಂದಾವನ ಉದ್ಯಾನದಲ್ಲಿ ಸಂಗೀತ ಕಾರಂಜಿ ಸಮಯ

ಈ ಉದ್ಯಾನದಲ್ಲಿ ಸಂಗೀತ ಕಾರಂಜಿಯು ಪ್ರತಿ ಸೋಮವಾರ ದಿಂದ ಶುಕ್ರವಾರ ವರೆಗೆ ಸಂಜೆ 6:30 ರಿಂದ 7:30 ರವರೆಗೆ ಹಾಗು ಶನಿವಾರ ಮತ್ತು ಭಾನುವಾರ ಸಂಜೆ 6:30 ರಿಂದ 8:30 ರವರೆಗೆ ಇರುತ್ತದೆ.

ಬೃಂದಾವನವೂ ಕೃಷ್ಣರಾಜಸಾಗರ ಆಣೆಕಟ್ಟಿನ ಕೆಳಭಾಗದಲ್ಲೇ ಇದ್ದು ಇದನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ರ ಕಾಲದಲ್ಲಿ ನಿರ್ಮಾಣಗೊಂಡ ಕಾರಣ KRS ಅಥವಾ ಕೃಷ್ಣರಾಜಸಾಗರ ಆಣೆಕಟ್ಟಿನ ಹೆಸರನ್ನು ಪಡೆದುಕೊಂಡಿದೆ. ವರ್ಷಕ್ಕೆ ಸುಮಾರು 2 ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ, ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಬೃಂದಾವನ ಹೂದೋಟವನ್ನು ಹೋಗಿ ನೋಡಲೇಬೇಕಾದ ಸ್ಥಳವಾಗಿದೆ. ಹಿಂದೆ ಕೃಷ್ಣರಾಜೇಂದ್ರ ಟೆರೇಸ್ ಗಾರ್ಡನ್ ಎಂದು ಕರೆಯಲ್ಪಡುತ್ತಿದ್ದ ಬೃಂದಾವನವೂ ಅರವತ್ತು ಎಕರೆಗಳ ಜಾಗದಲ್ಲಿ ಹರಡಿದೆ. ಇದರ ಪಕ್ಕದಲ್ಲಿ 75 ಎಕರೆಯಾ 2 ತೋಟಗಾರಿಕಾ ಫಾರ್ಮ್‌ಗಳು, ನಾಗವನ (30 ಎಕರೆ) ಮತ್ತು ಚಂದ್ರವನ (5 ಎಕರೆ) ಹರಡಿರುವ ಹಣ್ಣಿನ ತೋಟವೂ ಇದೆ.

ಇಲ್ಲಿ ಸುಂದರವಾದ ಹೂ ಹಾಸಿಗೆ, ಹುಲ್ಲು ಹಾಸು, ಮರಗಳು, ಫಿಕಸ್ ಮರಗಳು, ಎಲೆಗೊಂಚಲು ಸಸ್ಯಗಳಾದ ಡ್ಯುರಾಂಟಾ ಪ್ಲುಮಾರಿಯಾ, ಯುಫೋರ್ಬಿಯಾ, ಸೆಲೋಸಿಯಾ, ಮಾರಿಗೋಲ್ಡ್ ಮತ್ತು ಬೊಗೆನ್‌ವಿಲ್ಲೆಯಂತಹ ಹೂಬಿಡುವ ಸಸ್ಯಗಳಿವೆ. ಸಣ್ಣ ಕೊಳಗಳು ಮತ್ತು ಚಿಲುಮೆಗಳನ್ನು ಕಾಣಬಹುದು. ಪ್ರವಾಸಿಗರು ಉದ್ಯಾನವನದ ಮಧ್ಯಭಾಗದಲ್ಲಿರುವ ಕೆರೆಯಲ್ಲಿ ಕಾವೇರಿಯ ಪ್ರತಿಮೆಯ ಸುತ್ತ ದೋಣಿ ವಿಹಾರದಲ್ಲಿ ತೆರಳಬಹುದು. ಸಂದರ್ಶಕರು ಹೂದೋಟದ ಉತ್ತರಭಾಗದಲ್ಲಿ ಪ್ರದರ್ಶನ ಕೇಂದ್ರದ ಸಮೀಪ ಇರುವ ಸಂಗೀತದ ತಾಳಕ್ಕೆ ತಕ್ಕಂತೆ ಕುಣಿಯುವ ಬಣ್ಣದ ನೀರಿನಚಿಲುಮೆಯನ್ನು(ಸಂಗೀತ ಕಾರಂಜಿ) ನೋಡಲೇಬೇಕು.

ಉದ್ಯಾನವು ಸಾರ್ವಜನಿಕರಿಗೆ ತೆರೆದಿರುತ್ತದೆ ಮತ್ತು ಪ್ರವೇಶ ಶುಲ್ಕವನ್ನು ವಿಧಿಸಲಾಗುತ್ತದೆ. ಉದ್ಯಾನವನ್ನು ಕರ್ನಾಟಕ ಸರ್ಕಾರದ ಉದ್ಯಮವಾದ ಕಾವೇರಿ ನೀರಾವರಿ ನಿಗಮ ನಿರ್ವಹಿಸುತ್ತದೆ. ಉದ್ಯಾನವು ಸಸ್ಯಾಲಂಕರಣದ ಕೆಲಸಗಳನ್ನು ಹೊಂದಿದೆ (ಪೊದೆಗಳನ್ನು ಕತ್ತರಿಸುವ ಮೂಲಕ ರಚಿಸಲಾದ ಪ್ರಾಣಿಗಳ ಶಿಲ್ಪಗಳು), ಪೆರ್ಗೊಲಾಸ್ (ಬಳ್ಳಿಗಳಿಂದ ಆವೃತವಾದ ಮಬ್ಬಾದ ಹಾದಿ).

ಭೇಟಿ ನೀಡಿ
ಶ್ರೀರಂಗಪಟ್ಟಣ ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ಮಂಡ್ಯ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು