ಪಾರ್ಥಸಾರಥಿ ಮತ್ತು ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಪುಟ್ಟ ಗ್ರಾಮವಾದ ತೊಂಡನೂರಿನಲ್ಲಿದೆ. ಈ ಸ್ಥಳವನ್ನು ಈಗ ತೊಣ್ಣೂರು ಎಂದು ಕರೆಯಲಾಗುತ್ತದೆ. ಈ ದೇವಾಲಯವನ್ನು 12 ನೇ ಶತಮಾನದಲ್ಲಿ ಹೊಯ್ಸಳ ದೊರೆ ವಿಷ್ಣುವರ್ಧನ ನಿರ್ಮಿಸಲಾದ ಹಳೆಯ ದೇವಾಲಯವಾಗಿದೆ. ತೊಂಡನೂರನ್ನು ಪುರಾಣದಲ್ಲಿ ಪಂಚ ನಾರಾಯಣ ಕ್ಷೇತ್ರಗಳಲ್ಲಿ ಒಂದು ಎಂದು ನಂಬಲಾಗಿದೆ.
ಬೆಂಗಳೂರಿನಿಂದ ಸುಮಾರು 148 ಕಿ.ಮೀ ದೂರದಲ್ಲಿದೆ. ಮಂಡ್ಯ ನಗರದಿಂದ ಸುಮಾರು 36 ಕಿ.ಮೀ ದೂರದಲ್ಲಿದೆ ಹಾಗೂ ಮೈಸೂರುನಗರ ದಿಂದ 35 ಕಿ.ಮೀ ದೂರದಲ್ಲಿದೆ. ಪಾಂಡವಪುರವು ಹತ್ತಿರದ ರೈಲ್ವೆ ನಿಲ್ದಾಣವಾಗಿದ್ದು ಕೇವಲ 13 ಕಿ.ಮೀ ದೂರದಲ್ಲಿದೆ.
ಈ ದೇವಾಲಯವು ಬೆಳ್ಳಿಗ್ಗೆ 7:30 ರಿಂದ ಮದ್ಯಾಹ್ನ12:00 ರವರೆಗೆ ಮತ್ತು ಸಂಜೆ 4:00 ಮತ್ತು ರಾತ್ರಿ 7:30 ರ ವರೆಗೆ ತೆರೆದಿರುತ್ತದೆ.
ಪಾರ್ಥಸಾರಥಿ ಮತ್ತು ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನವು 1000 ವರ್ಷಗಳ ಇತಿಹಾಸ ಹೊಂದಿರುವ ಹೊಯ್ಸಳರ ಕಾಲದ ಪುರಾತನ ದೇವಾಲಯವಾಗಿದೆ. ಈ ದೇವಾಲಯದಲ್ಲಿ ಭೂದೇವಿ ಮತ್ತು ಶ್ರೀದೇವಿ ಮೂರ್ತಿಯೊಂದಿಗೆ ಶ್ರೀಕೃಷ್ಣರ ನಿಂತಿರುವ ಭಂಗಿಯಲ್ಲಿ ವಿಗ್ರಹವನ್ನು ಕೆತ್ತಲಾಗಿದೆ. ಧರ್ಮರಾಜ್ ಮತ್ತು ಋಷಿ ಬೃಗು ಪ್ರತಿಷ್ಠಾಪಿಸಿದ್ದಾರೆ ಎಂದು ನಂಬಲಾಗಿದೆ. ದೇವಾಲಯವು ಯಾದವನಾಯಕಿಯ ಪ್ರತಿಮೆಯನ್ನು ಸಹ ಹೊಂದಿದೆ. ದೇವಾಲಯದ ವಿಶೇಷತೆ ಎಂದರೆ ನರ್ತಿಸುವ ರೂಪದಲ್ಲಿರುವ ಗೋಪಾಲ ಕೃಷ್ಣನ ಪ್ರತಿಮೆಯು ಬಹಳ ವಿಶೇಷವಾಗಿದೆ ಏಕೆಂದರೆ ಎಡಗಾಲು ಮುಂಭಾಗದಲ್ಲಿ ಎಲ್ಲಿಯೂ ಕಾಣಿಸುವುದಿಲ್ಲ, ಸಾಮಾನ್ಯವಾಗಿ ಎಲ್ಲಾಕಡೆ ಬಲಗಾಲು ಮುಂಭಾಗದಲ್ಲಿರುತ್ತದೆ.
ದೇವಾಲಯವು ಕಲ್ಲಿನ ಉಯ್ಯಾಲೆಯನ್ನು ಹೊಂದಿದೆ ಇದನ್ನು ದೇವಸ್ಥಾನದ ಉತ್ಸವ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತದೆ. ದೇವಾಲಯವು ಪೂರ್ವಕ್ಕೆ ಮುಖವಾಗಿದ್ದು ಪೂರ್ವ ಭಾಗದಿಂದ ಪ್ರವೇಶವಿದೆ. ಪ್ರವೇಶ ದ್ವಾರದ ನಂತರ ಬಲಭಾಗದಲ್ಲಿ ಮಂಟಪವಿದೆ. ದೇವಾಲಯದ ಮುಂಭಾಗದಲ್ಲಿ ಬಲಿಪೀಠವಿದೆ. ಗರ್ಭಗುಡಿಯ ಪ್ರವೇಶ ದ್ವಾರದ ಎರಡೂ ಬದಿಯಲ್ಲಿ ವಿಜಯನಗರ ಕಾಲದ ಚಿತ್ರಗಳಿವೆ. ದೇವಾಲಯವು ಗರ್ಭಗುಡಿ, ಅಂತರಾಳ / ಸುಖನಾಸಿ, ನವರಂಗ ಮಂಟಪ ಮತ್ತು ಮಹಾ ಮಂಟಪಗಳನ್ನು ಒಳಗೊಂಡಿದೆ. ಗರ್ಭಗುಡಿಯು ಪಾದಬಂಧ ಅಧಿಷ್ಠಾನದ ಮೇಲೆ 3 ಪಟ್ಟ ಕುಮುದಂ ಮತ್ತು ಪಟ್ಟಿಕವನ್ನು ಹೊಂದಿದೆ. ಗರ್ಭಗುಡಿಯ ಮೇಲೆ ಏಕ ತಾಳ ದ್ರಾವಿಡ ಗೋಪುರವಿದೆ.
ಶಾಸನಗಳು ಹೊಯ್ಸಳ ನರಸಿಂಹನು ಕೊಡಲ್ಲ ರಾಜ್ಯವನ್ನು ಆಳುತ್ತಿದ್ದಾಗ ನಾರಾಯಣ ದೇವರಿಗೆ ನೀಡಿದ ದತ್ತಿ ಮತ್ತು ಉಡುಗೊರೆಯ ವಿವರ ನೀಡುತ್ತದೆ. ದಂತಕಥೆಯ ಪ್ರಕಾರ ತೊಂಡನೂರಿನಲ್ಲಿ ಶ್ರೀ ರಾಮಾನುಜರು ಈ ದೇವಾಲಯದಲ್ಲಿ ಉಳಿದುಕೊಂಡಿದ್ದರು ಮತ್ತು ಶ್ರೀ ನಂಬಿ ನಾರಾಯಣಸ್ವಾಮಿ ದೇವಾಲಯದ ಪುನರ್ನಿರ್ಮಾಣದಲ್ಲಿ ತೊಡಗಿದ್ದರು ಎಂದು ಹೇಳಲಾಗಿದೆ. ಮೈಸೂರು ರಾಜನ ಕಾಲದಲ್ಲಿ ಯಾದವ ನಾರಾಯಣ-ವಸಂತ ಗೋಪಾಲ ಎಂದು ಕರೆಯಲಾಗುತ್ತಿತ್ತು.
ಭೇಟಿ ನೀಡಿ