ಕೊಕ್ಕರೆ ಬೆಳ್ಳೂರು ಪಕ್ಷಿಧಾಮವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿರುವ ಬೆಳ್ಳೂರು ಎಂಬ ಹಳ್ಳಿಯಲ್ಲಿ ಇದೆ. ಮನುಷ್ಯರ ಜೊತೆ ಪಕ್ಷಿಗಳು ಜೀವನ ಮಾಡುವ ಕರ್ನಾಟಕದ ಅಪರೂಪದ ಪಕ್ಷಿತಾಣವಾಗಿದ್ದು ಇದು ಕೊಕ್ಕರೆ ಬೆಳ್ಳೂರುನ ವಿಶೇಶತೆ ಆಗಿದೆ. ಬೆಳ್ಳಕ್ಕಿಗಳ ತವರು ಮನೆ ಎಂದು ಸಹ ಕೊಕ್ಕರೆ ಬೆಳ್ಳೂರುನ್ನು ಕರೆಯಲಾಗುತ್ತದೆ. ಪ್ರಕೃತಿ ಮತ್ತು ಪಕ್ಷಿ ಸಂತಾನ ಒಂದಕ್ಕೊಂದು ಬೆರೆತುಕೊಂಡಿರುವ ವಿಸ್ಮಯವನ್ನು ಇಲ್ಲಿ ಕಾಣಬಹುದು.
ಈ ಪಕ್ಷಿಧಾಮವು ಬೆಂಗಳೂರಿನಿಂದ ಸುಮಾರು 116 ಕಿ.ಮೀ ಮತ್ತು ಮಂಡ್ಯ ನಗರದಿಂದ ಸುಮಾರು 33 ಕಿ.ಮೀ ದೂರದಲ್ಲಿದೆ. ಹಾಗೂ ಮದ್ದೂರು ರೈಲು ನಿಲ್ದಾಣವು ಕೊಕ್ಕರೆ ಬೆಳ್ಳೂರು ಪಕ್ಷಿಧಾಮಕ್ಕೆ ಸಮೀಪದ ರೈಲು ನಿಲ್ದಾಣವಾಗಿದೆ, ಈ ನಿಲ್ದಾಣವು 17 ಕಿ.ಮೀ ದೂರದಲ್ಲಿದೆ.
ಇಲ್ಲಿನ ಸ್ಥಳೀಯ ನಿವಾಸಿಗಳೂ ಕೂಡ ಪಕ್ಷಿಗಳ ಬಗ್ಗೆ ಬಹಳ ಕಾಳಜಿಹೊಂದಿದ್ದು ಅವುಗಳ ರಕ್ಷಣೆ ಮಾಡುತ್ತಿದ್ದಾರೆ. ಹಾಗೆಯೇ ಪಕ್ಷಿಗಳೂ ಕೂಡ ಗ್ರಾಮದ ಸೌಂದರ್ಯವನ್ನು ಕಾಪಾಡಿಕೊಂಡಿದ್ದು ಮಾತ್ರವಲ್ಲದೆ ತಮ್ಮ ಮೂಲಕ ಈ ಪುಟ್ಟ ಗ್ರಾಮವನ್ನು ಇಡೀ ನಾಡಿನಲ್ಲೇ ಜನಪ್ರಿಯಗೊಳಿಸಿವೆ ಎಂದರೆ ತಪ್ಪಾಗಲಾರದು. ಬಣ್ಣದ ಕೊಕ್ಕರೆಗಳಲ್ಲದೆ, ಸ್ಪಾಟ್-ಬಿಲ್ಡ್ ಪೆಲಿಕಾನ್‌ಗಳು ಸಹ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. IUCN ರೆಡ್ ಲಿಸ್ಟ್‌ನಲ್ಲಿ ಎರಡನ್ನೂ ಬೆದರಿಕೆಗೆ ಒಳಗಾದವರೆಂದು ವರ್ಗೀಕರಿಸಲಾಗಿದೆ. ಈ ಗ್ರಾಮವು ಭಾರತದ 21 ಪಕ್ಷಿಗಳ ಸಂತಾನೋತ್ಪತ್ತಿ ತಾಣಗಳಲ್ಲಿ ಒಂದಾಗಿದೆ.
ಕೊಕ್ಕರೆ ಬೆಳ್ಳೂರು ಪಕ್ಷಿಧಾಮಕ್ಕೆ ಪ್ರವೇಶಿಸಲು ಯಾವುದೇ ಯಾವುದೇ ಪ್ರವೇಶ ಶುಲ್ಕವಿಲ್ಲಾ ಮತ್ತು ಈ ಪಕ್ಷಿಧಾಮಕ್ಕೆ ಭೇಟಿ ನೀಡಲು ನಿರ್ದಿಷ್ಟ ಸಮಯವಿಲ್ಲ. ಕೊಕ್ಕರೆಗಳು ಚಳಿಗಾಲದ ಸಮಯದಲ್ಲಿ ಬಂದು ಈ ಗ್ರಾಮದಲ್ಲಿ ವಾಸ ಮಾಡುವದರಿಂದ ಕೊಕ್ಕರೆ ಬೆಳ್ಳೂರು ಎಂದೇ ಪ್ರಸಿದ್ದಿ ಪಡೆದಿದೆ. ಇದು ಪಕ್ಷಿಗಳಿಗೆಂದು ಮಾನವ ನಿರ್ಮಿಸಿದ ಸ್ಥಳವಲ್ಲ ಬದಲಿಗೆ ಇದೊಂದು ಗ್ರಾಮವಾಗಿದ್ದು ಇಲ್ಲಿ ಪೆಲಿಕಾನ್ ಹಾಗೂ ಪೇಂಟೆಡ್ ಸ್ಟ್ರೋಕ್ ಅವುಗಳಂಥ ವಿಶೇಷವಾದ ಪಕ್ಷಿಗಳು ಸ್ವತಃ ತಮ್ಮ ಗೂಡುಗಳನ್ನು ಕಟ್ಟಿಕೊಂಡು ನಿರಂತರವಾಗಿ ನಿರ್ಮಿಸಿಕೊಂಡಿರುವ ಪಕ್ಷಿ ವನವಾಗಿದೆ.
ಭೇಟಿ ನೀಡಿ