ರಾಯ ಗೋಪುರವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಒಂದು ಪುರಾತನ ಸ್ತಂಭವಾಗಿದೆ. ರಾಯ ಗೋಪುರವು ಮೇಲುಕೋಟೆ ಬೆಟ್ಟದಲ್ಲಿರುವ ದೇವಾಲಯದ ಆವರಣದಲ್ಲಿ ಅರ್ಧ ನಿರ್ಮಿತವಾದ ಅತ್ಯಂತ ಪರಿಣಾಮಕಾರಿ ಪ್ರವೇಶ ದ್ವಾರದಂತಿರುವ ಸ್ತಂಭವಾಗಿದೆ. ರಾಯಗೋಪುರವು ಬಹುಶಃ 12 ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಹೊಯ್ಸಳ ರಾಜ ವಿಷ್ಣುವರ್ಧನ ಅವಧಿಯಲ್ಲಿ ನಿರ್ಮಿಸಲಾದ ಪ್ರಸಿದ್ಧ ಅಪೂರ್ಣ ದೇವಾಲಯವಾಗಿದೆ.
ರಾಯ ಗೋಪುರವು ಬೆಂಗಳೂರಿನಿಂದ ಸುಮಾರು 137ಕಿ.ಮೀ ದೂರದಲ್ಲಿದೆ. ಮಂಡ್ಯ ನಗರದಿಂದ ಸುಮಾರು 39ಕಿ.ಮೀ ದೂರದಲ್ಲಿದೆ ಹಾಗೂ ಮೈಸೂರುನಗರ ದಿಂದ 47ಕಿ.ಮೀ ದೂರದಲ್ಲಿದೆ. ಹಾಸನದಿಂದ 88ಕಿ.ಮೀ ದೂರದಲ್ಲಿದೆ. ಪಾಂಡವಪುರ ಹತ್ತಿರದ ರೈಲ್ವೆ ನಿಲ್ದಾಣವಾಗಿದ್ದು ಕೇವಲ 29 ಕಿ.ಮೀ ದೂರದಲ್ಲಿದೆ.
ರಾಯಗೋಪುರ ಹೊಯ್ಸಳ ವಾಸ್ತುಶಿಲ್ಪದೊಂದಿಗೆ ಸುಂದರವಾದ ಕೆತ್ತನೆಗಳನ್ನು ಹೊಂದಿರುವ ಅರ್ಧ ನಿರ್ಮಿತ ಗೋಪುರವು ನೋಡಲು ಭವ್ಯವಾಗಿದೆ. ಇದು ದೇವಾಲಯದ ಪಶ್ಚಿಮ ಮಾರ್ಗದಲ್ಲಿ ನಿಂತಿದೆ. ಇದು ನಾಲ್ಕು ಎತ್ತರದ ಕಂಬಗಳನ್ನು ಹೊಂದಿದ್ದು ಆದರೆ ಗೋಪುರವಿಲ್ಲ, “ಗೋಪುರ” ಎಂದರೆ ವಿಶೇಷವಾಗಿ “ದೇವಾಲಯದ ಪ್ರವೇಶ” ಎಂದರ್ಥ. ಆದರೆ ನಿರ್ಮಾಣಕ್ಕೆ ಬಳಸಲಾದ ಬೃಹತ್ ಕಂಬಗಳು ಮತ್ತು ಕಲ್ಲುಗಳು. ಮೆಟ್ಟಿಲುಗಳಿವೆ. ಆದರೆ ಸಾಹಸಿಗಳು ಗೋಪುರದ ತುದಿಯನ್ನು ತಲುಪಬಹುದು, ಅಲ್ಲಿಂದ ನೀವು ಸಂಪೂರ್ಣ ಮೇಲುಕೋಟೆಯ ನೋಟವನ್ನು ಪಡೆಯಬಹುದು. ಇದು ಸಮುದ್ರ ಮಟ್ಟದಿಂದ 3,589 ಅಡಿ ಎತ್ತರದಲ್ಲಿರುವ ಬೆಟ್ಟದ ಮೇಲೆ ಗ್ರಾನೈಟ್ ಕಲ್ಲಿನ ನಿರ್ಮಿಸಲಾಗಿದೆ.
ರಾಯಗೋಪುರ ಮೇಲುಕೋಟೆಯ ಅಕ್ಕ-ತಂಗಿ ಕೊಳದ ಸಮೀಪ ಹಾಗೂ ಚೆಲುವನಾರಾಯಣ ಸ್ವಾಮಿ ದೇವಾಲಯದ ಬೆಟ್ಟದ ಎಂಬ ಹಚ್ಚ ಹಸಿರಿನ ಮತ್ತು ರಮಣೀಯ ಸ್ಥಳದಲ್ಲಿದೆ. ರಾಯರ ಗೋಪುರವು ಕೆಲವು ಸಂಕೀರ್ಣ ಕೆತ್ತನೆಗಳನ್ನು ಹೊಂದಿದೆ. ಸುಂದರವಾಗಿ ಅಲಂಕರಿಸಲ್ಪಟ್ಟ ಆನೆಯ ಚಿತ್ರಗಳು, ಅದರ ಬದಿಯಲ್ಲಿ ಗಂಟೆಗಳನ್ನು ಹೊಂದಿದೆ. ಗ್ರಾನೈಟ್ ಕಂಬಗಳ ಮೇಲೆ ಯೋಗ ನರಸಿಂಹನ ಪ್ರತಿಮೆ. ಹೀಗೆ ಹಲವಾರು ಚಿತ್ರಗಳಿಂದ ಕೊಡಿದೆ. ರಾಯಗೋಪುರವು ಭವ್ಯವಾದ ಒಂದು ಕಲ್ಲಿನ ಮಂಟಪವಾಗಿ ಸೌಂದರ್ಯದಿಂದ ಕಾಣುವುದು. ರಾಯಗೋಪುರದಲ್ಲಿ ಹಲವಾರು ಜನಪ್ರಿಯ ಚಿತ್ರಗಳನ್ನೂಇಲ್ಲಿ ಚಿತ್ರೀಕರಣಮಾಡಲಾಗಿದೆ. 14 ನೇ ಶತಮಾನದ ಮುಸ್ಲಿಂ ಆಕ್ರಮಣದಿಂದ ಬಳಲುತ್ತಿರುವ ದೇವಾಲಯ ಮತ್ತು ಸುತ್ತಮುತ್ತಲಿನ ಐತಿಹಾಸಿಕ ಕಲಾಕೃತಿಗಳು ಪಾಳು ಬಿದ್ದಿವೆ.ರಾಯಗೋಪುರ “ಮೇಲುಕೋಟೆ”ಯ ಹಚ್ಚ ಹಸಿರಿನ ಮತ್ತು ರಮಣೀಯ ಸ್ಥಳವಾಗಿದೆ.
ಭೇಟಿ ನೀಡಿ