ಶ್ರೀರಂಗಪಟ್ಟಣ ಕೋಟೆಯು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿ ಇರುವ ಒಂದು ಕೋಟೆ. ಮೈಸೂರು ಸಾಮ್ರಾಜ್ಯದ ಐತಿಹಾಸಿಕ ರಾಜಧಾನಿಯಾದ ಶ್ರೀರಂಗಪಟ್ಟಣದಲ್ಲಿರುವ ಒಂದು ಐತಿಹಾಸಿಕ ಕೋಟೆಯಾಗಿದೆ. ಶ್ರೀರಂಗಪಟ್ಟಣ ಕೋಟೆಯು ಇಲ್ಲಿಯ ಪ್ರೇಕ್ಷಣೀಯ ಸ್ಥಳ ಮತ್ತು ಅನೇಕ ಐತಿಹಾಸಿಕ ಸ್ಥಳಗಳನ್ನು ಹೊಂದಿದೆ, ಆಕರ್ಷಕ ವಾಸ್ತುಶಿಲ್ಪವನ್ನು ಪ್ರಸ್ತುತಪಡಿಸುತ್ತದೆ ಮತ್ತು ಹೆಚ್ಚಿನ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಶ್ರೀರಂಗಪಟ್ಟಣ ಕೋಟೆಯು ಕರ್ನಾಟಕದ ಅತ್ಯಂತ ಜನಪ್ರಿಯ ಕೋಟೆಗಳಲ್ಲಿ ಒಂದಾಗಿದೆ.
ಶ್ರೀರಂಗಪಟ್ಟಣ ಕೋಟೆಯು ಬೆಂಗಳೂರಿನಿಂದ ಸುಮಾರು 127ಕಿ.ಮೀ ದೂರದಲ್ಲಿದೆ. ಮಂಡ್ಯ ನಗರದಿಂದ ಸುಮಾರು 27 ಕಿ.ಮೀ ದೂರದಲ್ಲಿದೆ ಹಾಗೂ ಮೈಸೂರುನಗರ ದಿಂದ ಕೇವಲ 15 ಕಿ.ಮೀ ದೂರದಲ್ಲಿದೆ. ಮೈಸೂರು ರೈಲ್ವೆ ನಿಲ್ದಾಣದಿಂದ ಕೇವಲ 16ಕಿ.ಮೀ ದೂರದಲ್ಲಿದೆ ಶ್ರೀರಂಗಪಟ್ಟಣ 1ಕಿ.ಮೀ ದೂರದಲ್ಲಿದೆ.
1454 ರಲ್ಲಿ ತಿಮ್ಮಣ್ಣ ನಾಯಕ ರಿಂದ ನಿರ್ಮಿಸಲ್ಪಟ್ಟ ಕೋಟೆಯಾಗಿದೆ. ನಂತರ ಈ ಪ್ರದೇಶವು ಮೈಸೂರು ಒಡೆಯರ್ ರಾಜ, ಕಂಠೀರವ ನರಸರಾಜ ಒಡೆಯರ್ ಅವರ ನಿಯಂತ್ರಣಕ್ಕೆ ಒಳಪಟ್ಟಿತು, ಈ ಕೋಟೆಯನ್ನು 1654 ರಲ್ಲಿ ಪುನರ್ನಿರ್ಮಿಸಲಾಯಿತು.
ಈ ಕೋಟೆಯನ್ನು ರಾಜ ಹೈದರ್ ಅಲಿ ಮತ್ತು ರಾಜ ಟಿಪ್ಪು ಸುಲ್ತಾನ್ ಅವರು ಸಾಮ್ರಾಜ್ಯದ ಆಳ್ವಿಕೆಯ ಸಮಯದಲ್ಲಿ ಮಾರ್ಪಡಿಸಿದರು. ರಾಜ ಟಿಪ್ಪು ಸುಲ್ತಾನ್ ಈಸ್ಟ್ ಇಂಡಿಯಾ ಕಂಪನಿಗೆ ಸಂಬಂಧಿಸಿದ ಬ್ರಿಟಿಷ್ ಆಕ್ರಮಣಕಾರರ ವಿರುದ್ಧ ಇದನ್ನು ರಕ್ಷಿಸಲು ಹೋರಾಡಿದರು. ಕೋಟೆಯು ಆಕರ್ಷಕ ನಾಲ್ಕು ದ್ವಾರಗಳನ್ನು ಹೊಂದಿದೆ.
ಮೂರು ಕಡೆಗಳಲ್ಲಿ ಕಾವೇರಿ ನದಿಗಳು ಕೋಟೆಯನ್ನು ರಕ್ಷಿಸುತ್ತವೆ. ಕೋಟೆಯು ಪಶ್ಚಿಮ ಮತ್ತು ಉತ್ತರ ದಿಕ್ಕುಗಳಲ್ಲಿ ಕಾವೇರಿ ನದಿಯಿಂದ ರಕ್ಷಿಸಲ್ಪಟ್ಟಿದೆ. 18 ನೇ ಶತಮಾನದ ಕೊನೆಯಲ್ಲಿ ಫ್ರೆಂಚ್ ವಾಸ್ತುಶಿಲ್ಪಿಗಳ ಸಹಾಯದಿಂದ ಸಂಪೂರ್ಣವಾಗಿ ಭದ್ರಪಡಿಸಿದರು. ಕೋಟೆಯು ಲಾಲ್ ಮಹಲ್ ಮತ್ತು ರಾಜ ಟಿಪ್ಪು ಸುಲ್ತಾನನ ಅರಮನೆಯನ್ನು ಹೊಂದಿದ್ದು, ಬ್ರಿಟಿಷರು ಟಿಪ್ಪು ಸುಲ್ತಾನನ ಅರಮನೆಯನ್ನು 1799 ರಲ್ಲಿ ವಶಪಡಿಸಿಕೊಂಡಾಗ ಅದನ್ನು ಕೆಡವಲಾಯಿತು. ಏಳು ಅರಮನೆಗಳು ಮತ್ತು ಎರಡು ಕತ್ತಲಕೋಣೆ(ಬಂದೀಖಾನೆ)ಗಳಿವೆ.
ಒಡೆಯರ್‌ಗಳು ತಮ್ಮ ರಾಜಧಾನಿಯನ್ನು ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ಸ್ಥಳಾಂತರಿಸಿದರು ಮತ್ತು ಕೋಟೆಯನ್ನು ಸಾಮ್ರಾಜ್ಯದ ಕೇಂದ್ರವಾಗಿ ಸ್ಥಾಪಿಸಿದರು. ಚಿಕ್ಕ ದೇವರಾಜ ಒಡೆಯರ್ (1673 ರಿಂದ 1704) ಆಳ್ವಿಕೆಯಲ್ಲಿ ಈ ಪ್ರದೇಶ ಮತ್ತು ಕೋಟೆಯನ್ನು ಬದಲಾಯಿಸಲಾಯಿತು. ಕೃಷ್ಣರಾಜ ಒಡೆಯರ್ (1734-66) ಆಳ್ವಿಕೆಯ ಸಮಯದಲ್ಲಿ ಕೋಟೆಯು ರಾಜ್ಯದ ಪ್ರಬಲವಾದ ಮಿಲಿಟರಿ ಶಕ್ತಿಯಾಯಿತು.ಇದನ್ನು ಮಿಲಿಟರಿ ಜನರಲ್ ಹೈದರ್ ಅಲಿ ನಿಯಂತ್ರಿಸುತ್ತಿದ್ದರು. 1757 ರ ಸಮಯದಲ್ಲಿ ರಾಜ ಹೈದರ್ ಅಲಿ ಕೋಟೆಯನ್ನು ಆಕ್ರಮಣಕಾರಿ ಮರಾಠರಿಗೆ ಬಿಟ್ಟುಕೊಡಬೇಕಾಗಿತ್ತು, ಆದರೆ ನಂತರ ಅವನು ಅದನ್ನು ಮರಳಿ ಪಡೆದರು.
1782 ರ ಸಮಯದಲ್ಲಿ ರಾಜ ಹೈದರ್ ಅಲಿಯ ಮಗ ರಾಜ ಟಿಪ್ಪು ಸುಲ್ತಾನ್ ಕೋಟೆಯ ಮೇಲೆ ಹಿಡಿತ ಸಾಧಿಸಿದನು ಮತ್ತು ಕೋಟೆಗಳನ್ನು ಭದ್ರಪಡಿಸಿದನು. ರಾಜ ಟಿಪ್ಪು ಸುಲ್ತಾನನ ಪ್ರದೇಶವನ್ನು ಬ್ರಿಟೀಷ್ ಪಡೆಗಳು ಹಲವು ಬಾರಿ ಆಕ್ರಮಿಸಿತ್ತು. ರಾಜ ಟಿಪ್ಪು ಸುಲ್ತಾನ್ ಫ್ರೆಂಚರೊಂದಿಗೆ ಮೈತ್ರಿ ಹೊಂದಿದ್ದನು ಮತ್ತು ನೆರವಿಗಾಗಿ ನೆಪೋಲಿಯನ್ ಗೆ ಪತ್ರದ ಮೂಲಕ ಮನವಿ ಮಾಡಿದರು. ಹಲವಾರು ವಿಫಲ ಪ್ರಯತ್ನಗಳ ನಂತರ, ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷ್ ಪಡೆಗಳು, ಕರ್ನಲ್ ಆರ್ಥರ್ ವೆಲ್ಲೆಸ್ಲಿ ನೇತೃತ್ವದಲ್ಲಿ 1799 ರಂದು ದಾಳಿ ಮಾಡಿತು.
ರಾಜ ಟಿಪ್ಪು ಸುಲ್ತಾನ್ ಯುದ್ಧದಲ್ಲಿ ಹುತಾತ್ಮನಾದ ನಂತರ, ಇಂಗ್ಲಿಷ್ ಅಧಿಕಾರಿಗಳು ಒಡೆಯರ್ ರಾಣಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು. ಮಾರ್ಕ್ವೆಸ್ ವೆಲ್ಲೆಸ್ಲಿ ಅವರು ಕೋಟೆಯ ಉಸ್ತುವಾರಿ ವಹಿಸಿದ್ದರು. ರಾಜ ಟಿಪ್ಪು ಸುಲ್ತಾನನ ಕತ್ತಿ ಮತ್ತು ಉಂಗುರವನ್ನು ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿ ಇದಲಾಗಿದೆ ಮತ್ತು ಯುದ್ಧದ ವಿಜಯದ ಗೌರವರಿಂದ ತೆಗೆದುಕೊಳ್ಳಲಾಗಿದೆ.
ಭೇಟಿ ನೀಡಿ