ಟಿಪ್ಪುವಿನ ಶವ ಪತ್ತೆಯಾದ ಸ್ಥಳವು ಕೋಟೆಯ ಉತ್ತರದ ಅಂಚಿಗೆ ಸಮೀಪದಲ್ಲಿದೆ. ಶ್ರೀರಂಗಪಟ್ಟಣ ಕೋಟೆಯ ಉತ್ತರದ 300 m ದೂರದಲ್ಲಿದೆ. ಮಸೀದಿ-ಎ-ಅಲಾದಿಂದ ವಾಟರ್ ಗೇಟ್ ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿ ಕಂಡು ಬರುವ ಕಲ್ಲಿನ ಬೇಲಿಯಿಂದ ಸುತ್ತುವರಿದ ಗೇಟ್‌ವೇ ಪ್ರದೇಶವು ಟಿಪ್ಪುವಿನ ದೇಹವು ಕಂಡುಬಂದ ಪ್ರದೇಶವೆಂದು ಗುರುತಿಸಲಾಗಿದೆ.
ಟಿಪ್ಪುವಿನ ಶವ ಪತ್ತೆಯಾದ ಸ್ಥಳವು ಬೆಂಗಳೂರಿನಿಂದ ಸುಮಾರು 127ಕಿ.ಮೀ ದೂರದಲ್ಲಿದೆ. ಮಂಡ್ಯ ನಗರದಿಂದ ಸುಮಾರು 27 ಕಿ.ಮೀ ದೂರದಲ್ಲಿದೆ ಹಾಗೂ ಮೈಸೂರುನಗರ ದಿಂದ ಕೇವಲ 15 ಕಿ.ಮೀ ದೂರದಲ್ಲಿದೆ. ಮೈಸೂರು ರೈಲ್ವೆ ನಿಲ್ದಾಣದಿಂದ ಕೇವಲ 16ಕಿ.ಮೀ ದೂರದಲ್ಲಿದೆ ಶ್ರೀರಂಗಪಟ್ಟಣ 1ಕಿ.ಮೀ ದೂರದಲ್ಲಿದೆ.
ಬ್ರಿಟಿಷರಿಂದ 1799 ರಲ್ಲಿ ಮೂರು ಸೈನ್ಯಗಳು ಮೈಸೂರಿಗೆ ಬಂದವು ಒಂದು ಬಾಂಬೆ ಮತ್ತು ಎರಡು ಬ್ರಿಟಿಷರು, ಅದರಲ್ಲಿ ಬ್ರಿಟಿಷ್ ಜನರಲ್ ಕಮಾಂಡೆಂಟ್ ಆಗಿ ಆರ್ಥರ್ ವೆಲ್ಲೆಸ್ಲಿ ಬಂದಿದ್ದರು. ಅವರು ನಾಲ್ಕನೇ ಮೈಸೂರು ಯುದ್ಧದಲ್ಲಿ ರಾಜಧಾನಿ ಶ್ರೀರಂಗಪಟ್ಟಣವನ್ನು ಮುತ್ತಿಗೆ ಹಾಕಿದರು. ಬ್ರಿಟಿಷರು ಒಂದು ತಿಂಗಳ ಕಾಲ ಮುತ್ತಿಗೆಯ ನಂತರ ಟಿಪ್ಪುವಿನ ರಾಜಧಾನಿ ಶ್ರೀರಂಗಪಟ್ಟಣ ಅನ್ನು ವಶಪಡಿಸಿಕೊಂಡರು. ಯುದ್ಧದಲ್ಲಿ ಟಿಪ್ಪುವನ್ನು 4 ಮೇ 1799 ರಂದು ಆರ್ಥರ್ ವೆಲ್ಲೆಸ್ಲಿ ರಿಂದ ಕೊಲ್ಲಲ್ಪಟ್ಟರು ಮತ್ತು ಅವನ ಸಾವಿನೊಂದಿಗೆ ನಾಲ್ಕನೇ ಮೈಸೂರು ಯುದ್ಧ (1799) ಕೊನೆಗೊಂಡಿತು. ಟಿಪ್ಪು ಸುಲ್ತಾನನ ಮರಣವನ್ನು ಬ್ರಿಟನ್‌ನಲ್ಲಿ ಸಾರ್ವಜನಿಕ ರಜೆಯ ಘೋಷಣೆಯೊಂದಿಗೆ ಸಂಭ್ರಮದ ಆಚರಣೆ ಆಚರಿಸಲಾಯಿತು.
ಮರುದಿನ ಮಧ್ಯಾಹ್ನ ಅವರನ್ನು ಗುಂಬಜ್ ನ ಅವರ ತಂದೆಯ ಸಮಾಧಿಯ ಪಕ್ಕದಲ್ಲಿರುವ ಗುಮಾಜ್‌ನಲ್ಲಿ ಸಮಾಧಿ ಮಾಡಲಾಯಿತು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ 60,000 ಕ್ಕೂ ಹೆಚ್ಚು ಸೈನಿಕರು ಇದ್ದರು, ಸರಿಸುಮಾರು 4,000 ಯುರೋಪಿಯನ್ನರು ಮತ್ತು ಉಳಿದ ಭಾರತೀಯರು. ಟಿಪ್ಪು ಸುಲ್ತಾನನ ಪಡೆಗಳು ಸುಮಾರು 30,000 ಮಾತ್ರ. ಟಿಪ್ಪುವಿನ ಮೂಲ ಹೆಸರು ಮೀರ್ ಫತೇಹ್ ಅಲಿ ಬಹದ್ದೂರ್ ಆಗಿತ್ತು ನಂತರ ಅವನನ್ನು ಟಿಪ್ಪು ಎಂಬ ಹೆಸರಿನಿಂದ ರೂಢಿಯಾಯಿತು. ಮಿಲಿಟರಿ ಸಲಹೆಗಾರರು ಟಿಪ್ಪು ಸುಲ್ತಾನನಿಗೆ ರಹಸ್ಯ ಮಾರ್ಗಗಳ ಮೂಲಕ ತಪ್ಪಿಸಿಕೊಳ್ಳಲು ಹೇಳಿದರು ಟಿಪ್ಪು “ಕುರಿಯಾಗಿ ಸಾವಿರ ವರ್ಷ ಬದುಕುವುದಕ್ಕಿಂತ ಒಂದು ದಿನ ಹುಲಿಯಾಗಿ ಬದುಕುವುದು ಉತ್ತಮ” ಎಂದು ಹೇಳಿದ್ದಾನೆ.
ಶ್ರೀರಂಗಪಟ್ಟಣದಲ್ಲಿರುವ ಗುಂಬಜ್ ಭೂದೃಶ್ಯದ ಉದ್ಯಾನದ ಮಧ್ಯಭಾಗದಲ್ಲಿರುವ ಮುಸ್ಲಿಂ ಸಮಾಧಿಯಾಗಿದ್ದು, ಟಿಪ್ಪು ಸುಲ್ತಾನ್ (ಪಶ್ಚಿಮ ಭಾಗ), ಅವರ ತಂದೆ ಹೈದರ್ ಅಲಿ (ಮಧ್ಯ) ಮತ್ತು ಅವರ ತಾಯಿ ಫಖ್ರ್-ಉನ್-ನಿಸಾ (ಪೂರ್ವ ಭಾಗ) ಅವರ ಸಮಾಧಿಗಳನ್ನು ಹೊಂದಿದೆ.
ಭೇಟಿ ನೀಡಿ