ತ್ರಿವೇಣಿ ಸಂಗಮ

ಮಂಡ್ಯ ಸಂಗಮ ಅಥವಾ ತ್ರಿವೇಣಿ ಸಂಗಮವು ಮೂರು ಪವಿತ್ರ ನದಿಗಳಾದ ಕಾವೇರಿ ನದಿ, ಲೋಕಪಾವನಿ ನದಿ ಮತ್ತು ಹೇಮಾವತಿ ನದಿಗಳ ಸಂಗಮಸ್ಥಳವಾಗಿದೆ. ಈ ಸಂಗಮವು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸಮೀಪದಲ್ಲಿದೆ.

ಈ ಸಂಗಮ ಸ್ಥಳವು ಅತ್ಯಂತ ಮಂಗಳಕರ ಮತ್ತು ಪವಿತ್ರವೆಂದು ನಂಬಲಾಗಿದ್ದು, ದಂತಕಥೆಗಳ ಪ್ರಕಾರ ಸಂಗಮದ ನೀರಿನಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ನಿವಾರಣೆಯಾಗುತ್ತವೆ ಎಂಬ ಅಪಾರ ಭಕ್ತಿಯ ನಂಬಿಕೆ ಇದೆ.

ಈ ಸ್ಥಳವು ಬೆಂಗಳೂರಿನಿಂದ ಸುಮಾರು 129 ಕಿ.ಮೀ, ಮಂಡ್ಯದಿಂದ 29 ಕಿ.ಮೀ, ಮೈಸೂರಿನಿಂದ 18 ಕಿ.ಮೀ ಹಾಗೂ ಶ್ರೀರಂಗಪಟ್ಟಣದಿಂದ ಕೇವಲ 4.5 ಕಿ.ಮೀ ದೂರದಲ್ಲಿದೆ.

ಶ್ರೀರಂಗಪಟ್ಟಣಕ್ಕಿಂತ ಸ್ವಲ್ಪ ಮೊದಲು ಕಾವೇರಿ ನದಿ ಎರಡು ಭಾಗವಾಗಿ ಉತ್ತರ ಕಾವೇರಿ ಹಾಗೂ ದಕ್ಷಿಣ ಕಾವೇರಿಯಾಗಿ ಕೆಲದೂರ ಹರಿದು, ನಂತರ ಮತ್ತೆ ಒಂದಾಗಿ ಸೇರುತ್ತದೆ. ಈ ಮಧ್ಯೆ ಲೋಕಪಾವನಿ ನದಿ ಉತ್ತರ ಕಾವೇರಿಯೊಂದಿಗೆ ಸೇರುತ್ತದೆ.

ಭೇಟಿ ನೀಡಿ
ಶ್ರೀರಂಗಪಟ್ಟಣ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಮಂಡ್ಯ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section