ಮಾರ್ಕೋನಹಳ್ಳಿ ಅಣೆಕಟ್ಟು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿದೆ. ಈ ಅಣೆಕಟ್ಟನ್ನು ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ ಮತ್ತು ಇದನ್ನು 1942 ರಲ್ಲಿ ಮೈಸೂರು ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ದಿವಾನ ಸರ್ ಎಂ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ನಿರ್ಮಿಸಿದರು.
ಈ ಅಣೆಕಟ್ಟು ಬೆಂಗಳೂರಿನಿಂದ 95 ಕಿ.ಮೀ ಮತ್ತು ತುಮಕೂರು ನಗರದಿಂದ 64 ಕಿ.ಮೀ ದೂರದಲ್ಲಿದೆ. ಹಾಗು ಕುಣಿಗಲ್ ತಾಲ್ಲೂಕಿನಿಂದ 25 ಕಿ.ಮೀ ದೂರದಲ್ಲಿದೆ. ಕುಣಿಗಲ್ ರೈಲು ನಿಲ್ದಾಣವು ಈ ಅಣೆಕಟ್ಟಿಗೆ ಹತ್ತಿರದ ರೈಲು ನಿಲ್ದಾಣವಾಗಿದ್ದು 22 ಕಿ.ಮೀ ದೂರದಲ್ಲಿದೆ. ಇದು ಯಡಿಯೂರಿನಿಂದ ಕೇವಲ 12 ಕಿ.ಮೀ ದೂರದಲ್ಲಿದೆ.
ಜಲಾಶಯವು ಸುಮಾರು 4103 ಕಿ.ಮೀ ಜಲಾನಯನ ಪ್ರದೇಶವನ್ನು ಹೊಂದಿದೆ ಮತ್ತು ಸಮುದ್ರ ಮಟ್ಟದಿಂದ ಸುಮಾರು 73,157 ಮೀಟರ್ ಎತ್ತರದಲ್ಲಿದೆ ಮತ್ತು ಜಲಾಶಯವು 38 ಮಿಲಿಯನ್ ಘನ ಮೀಟರ್ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ.
ಭೇಟಿ ನೀಡಿ