ಕೈದಾಳ ಗಂಗಾದರೇಶ್ವರ ದೇವಾಲಯವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ತುಮಕೂರು ತಾಲೂಕಿನ ಕೈದಾಳ ಎಂಬ ಗ್ರಾಮದಲ್ಲಿ ಇದೆ. ಈ ದೇವಾಲಯವು ಒಂದು ಐತಿಹಾಸಿಕ ದೇವಾಲಯವಾಗಿದ್ದು, ಸುಮಾರು ಕ್ರಿ.ಶ. 1152ರಲ್ಲಿ ಹೊಯ್ಸಳರ ಸಾಮಂತ ಬಾಚಿದೇವನ ಕಾಲದಲ್ಲಿ ಈ ದೇವಾಲಯವು ದ್ರಾವಿಡ ಹಾಗೂ ಹೊಯ್ಸಳ ಶೈಲಿಯಲ್ಲಿ ನಿರ್ಮಾಣವಾಗಿರುವ, ಉತ್ಕೃಷ್ಟಮಟ್ಟದ ಕಲಾ ವೈಭವವನ್ನು ಹೊಂದಿರುವ ವಿಶೇಷ ದೇವಾಲಯವಾಗಿದೆ.
ಈ ದೇವಾಲಯವು ಬೆಂಗಳೂರಿನಿಂದ 75 ಕಿ.ಮೀ ದೂರದಲ್ಲಿದೆ ಮತ್ತು ತುಮಕೂರು ನಗರದಿಂದ 10 ಕಿ.ಮೀ ದೂರದಲ್ಲಿದೆ. ತುಮಕೂರು ನಗರ ರೈಲ್ವೆ ನಿಲ್ದಾಣದಿಂದ ಕೇವಲ 08 ಕಿ.ಮೀ ದೂರದಲ್ಲಿದೆ.
ಚೆನ್ನಕೇಶವ ದೇವಾಲಯದ ಪೂರ್ವ ಭಾಗದಲ್ಲಿರುವ ಗಂಗಾದರೇಶ್ವರ ದೇವಾಲಯವನ್ನು ದ್ರಾವಿಡ ಶೈಲಿಯಲ್ಲಿ ಕೆತ್ತಲಾಗಿದೆ ಮತ್ತು ಇದರ ನವರಂಗದಲ್ಲಿ ಹೊಯ್ಸಳ ಶೈಲಿಯಲ್ಲಿ ಕೆತ್ತಲಾದ ಕಂಬಗಳಿವೆ. ಈ ಕಂಬಗಳ ಕೆಳಭಾಗದಲ್ಲಿ ನಾಲ್ಕು ದಿಕ್ಕಿನಲ್ಲಿ ಬ್ರಹ್ಮ ವಿಷ್ಣು ಭೈರವ ಕೃಷ್ಣ ಗಣಪತಿ ಮತ್ತು ವೀರಭದ್ರ ದೇವತೆಗಳ ಚಿತ್ರಗಳನ್ನು ಕೆತ್ತಲಾಗಿದೆ. ನವರಂಗದ ಹೊರವಲಯದಲ್ಲಿ ಆನೆ ಮತ್ತು ಹೂಗಳ ಚಿತ್ರಣವನ್ನು 04 ಗೋಡೆಯ ಮೇಲೆ ಕೆತ್ತಲಾಗಿದೆ.
ಭೇಟಿ ನೀಡಿ




