ಕಾರ್ಪೊರೇಶನ್ ಬ್ಯಾಂಕ್ ಐತಿಹಾಸಿಕ ವಸ್ತು ಸಂಗ್ರಹಾಲಯವು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಉಡುಪಿ ನಗರದ ಹೃದಯ ಭಾಗದಲ್ಲಿ ಇರುವ, ಪ್ರಾಚೀನ ಭಾರತದಿಂದ ಇಂದಿನವರೆಗಿನ ನಾಣ್ಯಗಳ ಉತ್ತಮ ಸಂಗ್ರಹವನ್ನು ಹೊಂದಿರುವ ಸಂಗ್ರಹಾಲಯವಾಗಿದೆ. ಈ ವಸ್ತು ಸಂಗ್ರಹಾಲಯವನ್ನು ಉಡುಪಿ ನಾಣ್ಯ ಸಂಗ್ರಹಾಲಯ ಎಂದು ಸಹ ಕರೆಯುತ್ತಾರೆ.
ಈ ಸಂಗ್ರಹಾಲಯವು ಬೆಂಗಳೂರಿಂದ 399 ಕಿ.ಮೀ ಮತ್ತು ಮಂಗಳೂರಿನಿಂದ 56 ಕಿ.ಮೀ ದೂರದಲ್ಲಿದೆ. ಹಾಗೂ ಉಡುಪಿಯಿಂದ ಕೇವಲ 400 ಮೀಟರ್ ದೂರದಲ್ಲಿದೆ.
ಶ್ರೀ ಜೈಪ್ರಕಾಶ್ ರಾವ್ ಈ ಹೆರಿಟೇಜ್ ನಾಣ್ಯಗಳ ವಸ್ತುಸಂಗ್ರಹಾಲಯದ ವ್ಯವಸ್ಥಾಪಕರು. ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಲು ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಪ್ರತಿದಿನ ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ ತೆರೆದಿರುತ್ತದೆ (ಬ್ಯಾಂಕ್ ರಜಾದಿನಗಳಲ್ಲಿ ಮುಚ್ಚಲಾಗುತ್ತದೆ).





