ಬರಬಳ್ಳಿ ಕಾಳಿನದಿ ವೀಕ್ಷಣಾಸ್ಥಳವು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಬರಬಳ್ಳಿ ಗ್ರಾಮದ ಸಮೀಪದಲ್ಲಿರುವ ಮನಮೋಹಕ ಪ್ರಕೃತಿ ತಾಣವಾಗಿದೆ. ಇಲ್ಲಿಂದ ಕಾಳಿನದಿಯ ಸುಂದರ ಹರಿವು ಹಾಗೂ ಸುತ್ತಮುತ್ತಲಿನ ಹಚ್ಚಹಸಿರಿನ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಬಹುದು. ಈ ವೀಕ್ಷಣಾ ತಾಣವು ಸಾತೋಡಿ ಜಲಪಾತದಿಂದ ಕೇವಲ 2 ಕಿಲೋಮೀಟರ್ ದೂರದಲ್ಲಿದ್ದು, ಪ್ರವಾಸಿಗರಿಗೆ ಆಕರ್ಷಕ ತಾಣವಾಗಿದೆ.
ಬರಬಳ್ಳಿ ಕಾಳಿನದಿ ವೀಕ್ಷಣಾಸ್ಥಳದ ದೂರಗಳು
- ಬೆಂಗಳೂರು – 446 ಕಿ.ಮೀ
- ಕಾರವಾರ – 118 ಕಿ.ಮೀ
- ಯಲ್ಲಾಪುರ – 26 ಕಿ.ಮೀ




