ಬೆಳಂಬಾರ ಕಡಲತೀರ

ಬೆಳಂಬಾರ ಕಡಲತೀರವು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಬೆಳಂಬಾರ ಸಮೀಪದಲ್ಲಿರುವ ಕಡಲತೀರವಾಗಿದೆ. ಇದು ಒಂದು ಪ್ರಮುಖ ಬಂದರು ಪ್ರದೇಶವಾಗಿದ್ದು, ಸ್ಥಳೀಯ ಮೀನುಗಾರಿಕೆ ಮತ್ತು ಸಮುದ್ರ ಸಂಬಂಧಿತ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ.

ಬೆಳಂಬಾರ ಕಡಲತೀರದ ದೂರಗಳು

  • ಬೆಂಗಳೂರು – 500 ಕಿ.ಮೀ
  • ಕಾರವಾರ – 38 ಕಿ.ಮೀ
  • ಅಂಕೋಲ – 6 ಕಿ.ಮೀ
  • ಅಂಕೋಲ ರೈಲ್ವೆ ನಿಲ್ದಾಣ – 9 ಕಿ.ಮೀ

ಈ ಬಂದರು ಮತ್ತು ಅದರ ಪಕ್ಕದಲ್ಲಿರುವ ಕಡಲತೀರವು ಮುಖ್ಯವಾಗಿ ಮೀನುಗಾರಿಕಾ ಕಡಲತೀರವಾಗಿ ಗುರುತಿಸಿಕೊಂಡಿದೆ. ತೀರದ ಉದ್ದಕ್ಕೂ ಸಾಲಾಗಿ ನಿಂತಿರುವ ಮೀನುಗಾರಿಕಾ ದೋಣಿಗಳು ಮತ್ತು ಸಮೀಪದಲ್ಲಿರುವ ಮನೆಗಳು ಈ ಪ್ರದೇಶದ ವೈಶಿಷ್ಟ್ಯವಾಗಿವೆ. ಅಂಕೋಲದ ಕರಾವಳಿ ಜೀವನವನ್ನು ಹತ್ತಿರದಿಂದ ಅನುಭವಿಸಲು ಇದು ಉತ್ತಮ ಸ್ಥಳವಾಗಿದೆ.