ಬುರುಡೆ ಜಲಪಾತವು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕದಲ್ಲಿ ಗ್ರಾಮದ ಸಮೀಪದಲ್ಲಿರುವ ಸುಂದರವಾದ ಜಲಪಾತವಾಗಿದೆ. ಅಘನಾಶಿನಿ ನದಿಯು ತನ್ನ ಹರಿವಿನ ಮಧ್ಯೆ, ಎಡಭಾಗಕ್ಕೆ ಒಂದು ನೀರಿನ ಹರಿವು ರೂಪಗೊಂಡಿದ್ದು, ಈ ನೀರಿನಿಂದ ರೂಪುಗೊಂಡ ಜಲಪಾತವಾಗಿದೆ. ದಟ್ಟ ಹಸಿರು ಕಾಡುಗಳ ನಡುವೆ ಧುಮ್ಮಿಕ್ಕುವ ನೀರಿನ ನೋಟ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ.
ಬುರುಡೆ ಜಲಪಾತದ ದೂರಗಳು
- ಬೆಂಗಳೂರು – 422 ಕಿ.ಮೀ
- ಕಾರವಾರ – 117 ಕಿ.ಮೀ
- ಸಿದ್ದಾಪುರ – 25 ಕಿ.ಮೀ
ಪ್ರಕೃತಿಯ ಮಡಿಲಿನಲ್ಲಿ ನೆಲೆಗೊಂಡಿರುವ ಈ ಜಲಪಾತವು ಶಾಂತ ವಾತಾವರಣ ಮತ್ತು ನೈಸರ್ಗಿಕ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ವಿಶೇಷವಾಗಿ ಮಳೆಗಾಲ ಮತ್ತು ಮಳೆಯ ನಂತರದ ದಿನಗಳಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಜಲಪಾತದ ಸೌಂದರ್ಯ ಮತ್ತಷ್ಟು ಕಂಗೊಳಿಸುತ್ತದೆ. ಪ್ರಕೃತಿ ಪ್ರಿಯರು, ಛಾಯಾಗ್ರಾಹಕರು ಹಾಗೂ ವಾರಾಂತ್ಯದ ಪ್ರವಾಸವನ್ನು ಇಷ್ಟಪಡುವವರಿಗೆ ಬುರುಡೆ ಜಲಪಾತವು ಅತ್ಯುತ್ತಮ ತಾಣವಾಗಿದೆ.




