ಚಿಟ್ಟೆ ಉದ್ಯಾನವನ ಗೋಟೆಗಾಳಿ

ಚಿಟ್ಟೆ ಉದ್ಯಾನವನ ಗೋಟೆಗಾಳಿಯು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಗೋಟೆಗಾಳಿ ಗ್ರಾಮದಲ್ಲಿರುವ ಬಣ್ಣಬಣ್ಣದ ಚಿಟ್ಟೆಗಳು ಹಾಗೂ ಇತರ ಜೀವಿಗಳಿಗಾಗಿ ನಿರ್ಮಿಸಲಾದ ಸುಂದರ ಉದ್ಯಾನವನವಾಗಿದೆ. ಈ ಉದ್ಯಾನವನವು ಒಂದು ಹೆಕ್ಟೇರ್‌ಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ ಪ್ರದೇಶದಲ್ಲಿ ನಿರ್ಮಿಸಲಾಗಿದೆ.

ಗೋಟೆಗಾಳಿ ಚಿಟ್ಟೆ ಉದ್ಯಾವನದ ದೂರಗಳು

  • ಬೆಂಗಳೂರು – 492 ಕಿ.ಮೀ
  • ಕಾರವಾರ – 32 ಕಿ.ಮೀ
  • ಕಾರವಾರ ರೈಲ್ವೆ ನಿಲ್ದಾಣ – 37 ಕಿ.ಮೀ

ಸಮಯ

ಈ ಉದ್ಯಾನವು ಬೆಳಿಗ್ಗೆ 10 ರಿಂದ ಸಂಜೆ 5:30ರವರಿಗೆ ತೆರೆದಿರುತ್ತದೆ.

ಈ ಉದ್ಯಾನವನವು ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಅರಣ್ಯ ಇಲಾಖೆ ಹಾಗೂ ಎನ್‌ಪಿಸಿಐಎಲ್ (NPCIL) ಕೈಗಾದ ಸಿಎಸ್‌ಆರ್ (CSR) ಅನುದಾನದ ಸಹಾಯದಿಂದ ಈ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಉದ್ಯಾನವನದಲ್ಲಿ ಪ್ರಮುಖ ಚಿಟ್ಟೆ ಪ್ರಭೇದಗಳಾದ ಕ್ಯಾಲೆಟಾ ಡಿಸಿಡಿಯಾ (Caleta decidia), ಗ್ರೇ ಕೌಂಟ್ (Tanaecia lepidea), ಪೀಕಾಕ್ ಪ್ಯಾನ್ಸಿ (Peacock Pansy), ಗ್ರೇ ಪ್ಯಾನ್ಸಿ (Junonia atlites), ಹಳದಿ ಪ್ಯಾನ್ಸಿ (Junonia hierta) ಸೇರಿದಂತೆ ಹಲವು ಬಗೆಯ ಚಿಟ್ಟೆಗಳು ಕಂಡುಬರುತ್ತವೆ.