ಮಾಜಾಳಿ ಕಡಲತೀರ

ಮಾಜಾಳಿ ಕಡಲತೀರವು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಮಾಜಾಳಿ ಗ್ರಾಮದಲ್ಲಿ ಇರುವ ಸುಂದರ ಕಡಲತೀರ ಪ್ರದೇಶವಾಗಿದೆ. ಸುತ್ತಲಿನ ನೈಸರ್ಗಿಕ ಸೌಂದರ್ಯ, ಪ್ರಶಾಂತ ವಾತಾವರಣ ಹಾಗೂ ವಿಶಿಷ್ಟವಾದ ಕಪ್ಪು ಮರಳಿನ ತೀರದಿಂದ ಈ ಕಡಲತೀರವು ಪ್ರವಾಸಿಗರಿಗೆ ಒಂದು ಆಕರ್ಷಣೀಯ ಸ್ಥಳವಾಗಿದೆ.

ಮಾಜಾಳಿ ಕಡಲತೀರದ ದೂರಗಳು

  • ಬೆಂಗಳೂರು – 528 ಕಿ.ಮೀ
  • ಕಾರವಾರ – 12 ಕಿ.ಮೀ
  • ಕಾರವಾರ ರೈಲ್ವೆ ನಿಲ್ದಾಣ – 18 ಕಿ.ಮೀ