ನಿಗುಂಡಿ ಪ್ರಕೃತಿ ವೀಕ್ಷಣಾ ತಾಣವು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ನಿಗುಂಡಿ ಗ್ರಾಮದಲ್ಲಿರುವ ಸುಂದರ ಪ್ರವಾಸಿ ತಾಣವಾಗಿದೆ. ಈ ಸ್ಥಳವು ಕುಂಬರವಾಡದಿಂದ ಕದ್ರಾಗೆ ಹೋಗುವ ರಸ್ತೆಯ ಮಾರ್ಗ ಮಧ್ಯದಲ್ಲಿದೆ.
ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಇದು ಅತ್ಯಂತ ಸುಂದರವಾದ ಸ್ಥಳವಾಗಿದೆ. ಮಳೆಗಾಲದಲ್ಲಿ ಈ ಪ್ರದೇಶವು ಸ್ವರ್ಗದಂತೆಯೇ ಕಾಣುತ್ತದೆ. ಜೂನ್‌ನಿಂದ ನವೆಂಬರ್‌ವರೆಗೆ ಈ ಸ್ಥಳಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯವಾಗಿದೆ.
ನಿಗುಂಡಿ ಪ್ರಕೃತಿ ವೀಕ್ಷಣಾ ತಾಣದ ದೂರಗಳು
- ಬೆಂಗಳೂರು – 506 ಕಿ.ಮೀ
- ಕಾರವಾರ – 56 ಕಿ.ಮೀ
- ಜೋಯಿಡಾ – 28 ಕಿ.ಮೀ
- ದಾಂಡೇಲಿ – 50 ಕಿ.ಮೀ





