ಶಿವಗಂಗೆ ಜಲಪಾತ

ಶಿವಗಂಗೆ ಜಲಪಾತವು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ನೆಳ್ಳಳ್ಳಿಮಠ ಗ್ರಾಮದ ಸಮೀಪದಲ್ಲಿರುವ ಆಕರ್ಷಕ ಜಲಪಾತವಾಗಿದೆ. ಶಾಲ್ಮಲಾ ನದಿಯ ಹರಿವಿನಿಂದ ರೂಪುಗೊಂಡಿರುವ ಈ ಜಲಪಾತವು ಹಚ್ಚಹಸಿರಿನ ಪ್ರಕೃತಿಯ ನಡುವೆ ತನ್ನ ಸೌಂದರ್ಯವನ್ನು ಅನಾವರಣಗೊಳಿಸುತ್ತಿದ್ದು, ಪ್ರಕೃತಿ ಪ್ರಿಯರು ಮತ್ತು ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದೆ. ಮುಂದೆ ಈ ನದಿಯು ಬೇಡ್ತಿ ನದಿಯೊಂದಿಗೆ ಸೇರುತ್ತದೆ.

ಶಿವಗಂಗೆ ಜಲಪಾತದ ದೂರಗಳು

  • ಬೆಂಗಳೂರು – 446 ಕಿ.ಮೀ
  • ಕಾರವಾರ – 104 ಕಿ.ಮೀ
  • ಯಲ್ಲಾಪುರ – 66 ಕಿ.ಮೀ