ಶ್ರೀ ಘಂಟೆ ಗಣಪತಿ ದೇವಾಲಯವು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಚಂದಗುಳಿ ಗ್ರಾಮದಲ್ಲಿರುವ ಪುರಾತನ ದೇವಾಲಯವಾಗಿದೆ. ಈ ದೇವಾಲಯವು ಸೋದೆ ಅರಸರ ಕಾಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿತು ಎಂಬ ಪ್ರತೀತಿ ಇದೆ. ಈ ದೇವಾಲಯವು ಶ್ರೀಮಠದ ಅಧೀನದಲ್ಲಿದ್ದು, ಶ್ರೀಮಠದ ಶ್ರೀಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತವೆ.
ಶ್ರೀ ಘಂಟೆ ಗಣಪತಿ ದೇವಾಲಯದ ದೂರಗಳು
- ಬೆಂಗಳೂರು – 430 ಕಿ.ಮೀ
- ಕಾರವಾರ – 103 ಕಿ.ಮೀ
- ಯಲ್ಲಾಪುರ – 16 ಕಿ.ಮೀ
ಶ್ರೀ ಸಿದ್ಧಿವಿನಾಯಕ ದೇವರ ಆರಾಧಕರು ತಮ್ಮ ಕಷ್ಟಕಾಲದಲ್ಲಿ ದೇವರಿಗೆ ಘಂಟೆಯನ್ನು ಹರಕೆಯಾಗಿ ಮಾಡಿಕೊಂಡು, ತಮ್ಮ ಕಾರ್ಯಗಳು ನೆರವೇರಿದ ನಂತರ ಹರಕೆಯನ್ನು ತೀರಿಸುವ ಪರಿಪಾಠವನ್ನು ಅನುಸರಿಸುತ್ತಾರೆ. ಅನಾದಿ ಕಾಲದಿಂದಲೂ ಭಕ್ತಾದಿಗಳು ಘಂಟೆಗಳನ್ನು ಅರ್ಪಿಸಿ, ಹೋಮ-ಹವನಗಳನ್ನು ನೆರವೇರಿಸಿ ತಮ್ಮ ತಮ್ಮ ಹರಕೆಗಳನ್ನು ಈಡೇರಿಸಿಕೊಳ್ಳುವ ವಾಡಿಕೆ ಇದೆ.






