ಪುರಾತನ ಸೂರ್ಯನಾರಾಯಣ ದೇವಾಲಯ ಮಾಗಳ

ಪುರಾತನ ಸೂರ್ಯನಾರಾಯಣ ದೇವಾಲಯವು ಕರ್ನಾಟಕದ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಮಾಗಳ ಗ್ರಾಮದಲ್ಲಿರುವ ಐತಿಹಾಸಿಕ ಹಾಗೂ ವಾಸ್ತುಶಿಲ್ಪದ ದೃಷ್ಟಿಯಿಂದ ಮಹತ್ವ ಪಡೆದ ಪ್ರಾಚೀನ ದೇವಾಲಯವಾಗಿದೆ. ಈ ದೇವಾಲಯವನ್ನು ಕ್ರಿ.ಶ. 1209ರಲ್ಲಿ ಹೊಯ್ಸಳರ ಎರಡನೇ ಬಲ್ಲಾಳನ ಆಳ್ವಿಕೆಯ ಕಾಲದಲ್ಲಿ, ಮಹಾಕಾಳದ ಮಾಗಳದ ಸೋಮಯ್ಯ ಸೋಮೆಯ ಮಾರಮ್ಮರಸನು ನಿರ್ಮಿಸಿದನು.

ಮಾಗಳ ಪುರಾತನ ಸೂರ್ಯ ನಾರಾಯಣ ದೇವಾಲಯದ ದೂರಗಳು

  • ಬೆಂಗಳೂರು – 318 ಕಿ.ಮೀ
  • ಹೊಸಪೇಟೆ – 98 ಕಿ.ಮೀ
  • ಹೂವಿನಹಡಗಲಿ – 17 ಕಿ.ಮೀ
  • ರಾಣೆಬೆನ್ನೂರು ರೈಲ್ವೆ ನಿಲ್ದಾಣ – 56 ಕಿ.ಮೀ

ಈ ದೇವಾಲಯವು ಸೋಪ್‌ಸ್ಟೋನ್‌ (ಮೆದುವಾದ ಬಳಪದ ಕಲ್ಲು) ಬಳಸಿ ನಿರ್ಮಿಸಲಾದ ದಕ್ಷಿಣಾಭಿಮುಖ ತ್ರಿಕೂಟಾಚಲ ದೇವಾಲಯವಾಗಿದೆ. ಇದು ಮೂರು ಗರ್ಭಗುಡಿಗಳನ್ನು ಹೊಂದಿದೆ. ಪೂರ್ವ, ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳಿಗೆ ಮುಖಮಾಡಿರುವ ಈ ಗರ್ಭಗುಡಿಗಳಲ್ಲಿ, ಪಶ್ಚಿಮ ಭಾಗದ ಗರ್ಭಗುಡಿಯಲ್ಲಿ ಸೋಮೇಶ್ವರ ದೇವರ ಮೂರ್ತಿಯಿದೆ.

ಈ ದೇವಾಲಯದಲ್ಲಿ ಪ್ರಸ್ತುತ ಸೀಮಿತವಾಗಿ ಪೂಜಾ ಚಟುವಟಿಕೆಗಳು ನಡೆಯುತ್ತಿವೆ. ಬಹುಶಃ ಸೋಮೇಶ್ವರ ದೇವರಿಗೆ ಮಾತ್ರ ಪೂಜೆ ಸಲ್ಲಿಸಲಾಗುತ್ತದೆ. ಸೂರ್ಯನಾರಾಯಣ ಮತ್ತು ವೇಣುಗೋಪಾಲ ದೇವರ ಮೂರ್ತಿಗಳು ವಿರೂಪಗೊಂಡಿರುವುದರಿಂದ ಅವುಗಳಿಗೆ ಪೂಜೆ ನಡೆಯುತ್ತಿಲ್ಲ ಎಂದು ಹೇಳಲಾಗುತ್ತದೆ.

ಗರ್ಭಗುಡಿಗಳಿಗೆ ಹೊಂದಿಕೊಂಡಂತೆ ಅಂತರಾಳಗಳಿದ್ದು, ಅವೆಲ್ಲವೂ ಸಭಾಮಂಟಪಕ್ಕೆ ತೆರೆದುಕೊಳ್ಳುತ್ತವೆ. ಸಭಾಮಂಟಪದಲ್ಲಿ ದಕ್ಷಿಣ ಭಾಗದ ಮಂಟಪವಿದೆ. ಗರ್ಭಗುಡಿ ಮತ್ತು ಅಂತರಾಳಗಳ ದ್ವಾರಬಂಧಗಳು ಪಂಚಶಾಖಾ ವಿನ್ಯಾಸವನ್ನು ಹೊಂದಿದ್ದು, ಸುಂದರವಾದ ಅಲಂಕಾರಗಳಿಂದ ಕೂಡಿವೆ. ದ್ವಾರಬಂಧಗಳ ತಳಭಾಗದಲ್ಲಿ ದ್ವಾರಪಾಲಕರ ಶಿಲ್ಪಗಳಿವೆ.

ದೇವಾಲಯದ ಹೊರಭಿತ್ತಿಯಲ್ಲಿ ಹಲವಾರು ದೇವಕೋಷ್ಠಕಗಳಿದ್ದು, ಅವುಗಳಲ್ಲಿ ವಿವಿಧ ದೇವತೆಗಳ ಮೂರ್ತಿಗಳನ್ನು ಸ್ಥಾಪಿಸಲಾಗಿದೆ.

ಭೇಟಿ ನೀಡಿ
ಹೂವಿನ ಹಡಗಲಿ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ವಿಜಯನಗರ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section