ಭೀಮಾಂಬಿಕಾ ದೇವಸ್ಥಾನ ಇಟಗಿ

ಭೀಮಾಂಬಿಕಾ ದೇವಸ್ಥಾನ ಅಥವಾ ಭೀಮವ್ವ ದೇವಸ್ಥಾನವು ಕರ್ನಾಟಕದ ಗದಗ ಜಿಲ್ಲೆಯ ರೋನ್ ತಾಲ್ಲೂಕಿನ ಇಟಗಿಯ ದೇವಾಲಯ ಪಟ್ಟಣದಲ್ಲಿರುವ ಜನಪ್ರಿಯ ಮಠ ಮತ್ತು ದೇವಾಲಯವಾಗಿದೆ. ಇದು ಪ್ರಸ್ತುತಿ ಐತಿಹಾಸಿಕ ದೇವಾಲಯವಾಗಿ ಪ್ರಾಂತೀಯರಿಗೆ ಪ್ರಸಿದ್ದಿ ಪಡೆದಿದೆ. ಇಲ್ಲಿ ಶಂಭುಲಿಂಗ ದೇವಾಲಯ ದೇವಾಲಯದ ಒಳಭಾಗದಲ್ಲಿದ್ದು, ಭೀಮಾಂಭಿಕಾ ದೇವಾಲಯ ಮಠದ ಹೊರಭಾಗದಲ್ಲಿದೆ.

ಈ ದೇವಾಲಯವು ಬೆಂಗಳೂರಿನಿಂದ 422 ಕಿ.ಮೀ ಮತ್ತು ಹುಬ್ಬಳ್ಳಿ ನಗರ ದಿಂದ 99 ಕಿ.ಮೀ ದೂರದಲ್ಲಿದೆ. ಹಾಗೂ ಗದಗ ನಗರದಿಂದ 55 ಕಿ.ಮೀ ಮತ್ತು ಗದಗ ರೈಲ್ವೆ ನಿಲ್ದಾಣದಿಂದ 53 ಕಿಮೀ ದೂರದಲ್ಲಿದೆ.

ಇತಿಹಾಸ

ಭೀಮಾಂಭಿಕಾ ಇವರ ತಂದೆ ಸೋಮಣ್ಣ ಮತ್ತು ತಾಯಿ ಹನುಮಮ್ಮ. ಇವರ 12 ವರ್ಷದ ದಾಂಪತ್ಯದ ನಂತರ ಬನಶಂಕಮ್ಮನ ಆಶೀರ್ವಾದದಿಂದ ಜನಿಸಿದಳು. ಭೀಮಾಂಬಿಕಾ ದೇವಿಯ ಮೂಲ ಹೆಸರು ಶಂಕರಮ್ಮ ನಂತರ ಇವರು ಒಗದಾಡಪ್ಪರನ್ನು ಮದುವೆಯಾದರು. ಭೀಮಾಂಬಿಕಾ ದೇವಿಯು ಶಿವಶರಣೆಯರಾಗಿದ್ದು, ಸದಾ ದೇವರಲ್ಲಿ ತಲ್ಲೀನಳಾಗಿದ್ದು. ತನ್ನ ಗುರುತತ್ತ್ವ, ಪ್ರೀತಿ ಮತ್ತು ಕರುಣೆಯ ಮೂಲಕ ಅನೇಕ ಜನರಿಗೆ ಸಹಾಯ ಮಾಡುತಿದ್ದರು ಹಾಗೂ ಧಾರ್ಮಿಕ ಜೀವನವನ್ನು ನಡೆಸುವಂತೆ ಸಲಹೆ ನೀಡಿತಿದ್ದರು. ಇವರು ಅನೇಕ ಪವಾಡಗಳನ್ನು ಮಾಡಿದ್ದಾರೆ ಮತ್ತು ತನ್ನ ಭಕ್ತರಿಗೆ ಆಶೀರ್ವಾದವನ್ನು ನೀಡುತ್ತಾರೆ ಎಂದು ನಂಬಲಾಗಿದೆ. ಪ್ರಸ್ತುತ ಅವರ ಕುಟುಂಬದ 08ನೇ ತಲೆಮಾರಿನ ಸದಸ್ಯರು ಮಠದ ಆರೈಕೆ ಮಾಡುತ್ತಿದ್ದಾರೆ.

ಭೇಟಿ ನೀಡಿ
ರೋಣ ತಾಲೂಕು ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ಗದಗ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು