ಕಾಲಕಾಲೇಶ್ವರ ದೇವಾಲಯವು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಗಜೇಂದ್ರಗಡ ನಗರದ ಹತ್ತಿರ ಸುಮಾರು 300 ಅಡಿ ಎತ್ತರದ ಬೆಟ್ಟದ ಮೇಲೆ ಇರುವ ದೇವಾಲಯವಾಗಿದೆ. ಕಾಲಕಾಲೇಶ್ವರ ದೇವಾಲಯವು ಪುರಾತನ ದೇವಾಲಯವಾಗಿದ್ದು, ಈ ದೇವಾಲಯವನ್ನು ದಕ್ಷಿಣ ಕಾಶಿ ಎಂದು ಸಹ ಕರೆಯುತ್ತಾರೆ. ಇಲ್ಲಿ ಕಾಲಕಾಲೇಶ್ವರನ ರೂಪದಲ್ಲಿ ಪೂಜಿಸಲ್ಪಡುವ ಶಿವನ ಕಾಲಕಾಲೇಶ್ವರ ಅಥವಾ ದಕ್ಷಿಣ ಕಾಶಿ ದೇವಸ್ಥಾನವನ್ನು ಹೊಂದಿದೆ. ಇದು ಉದ್ಭವ ಲಿಂಗವನ್ನು ಹೊಂದಿರುವ ಸಾಂಪ್ರದಾಯಿಕ ದೇವಾಲಯವಾಗಿದೆ.
ಈ ದೇವಾಲಯವು ಬೆಂಗಳೂರಿನಿಂದ 415 ಕಿ.ಮೀ ಮತ್ತು ಹುಬ್ಬಳ್ಳಿ ನಗರದಿಂದ 117 ಕಿ.ಮೀ ದೂರದಲ್ಲಿದೆ. ಹಾಗೂ ಗದಗ ನಗರದಿಂದ 59 ಕಿ.ಮೀ ಮತ್ತು ಗಜೇಂದ್ರಗಡ ನಗರದಿಂದ ಕೇವಲ 06 ಕಿಮೀ ದೂರದಲ್ಲಿದೆ .
ಈ ದೇವಾಲಯದಲ್ಲಿ ಭಗವಾನ್ ಶಿವನನ್ನು ಕಾಲಕಾಲೇಶ್ವರ ರೂಪದಲ್ಲಿ ಪೂಜಿಸಲಾಗುತ್ತದೆ. ಪ್ರವಾಸಿಗರು ಈ ಪ್ರಾಚೀನ ದೇವಾಲಯವನ್ನು ನೇರವಾಗಿ ದೊಡ್ಡ ಸುಮಾರು 200 ಮೆಟ್ಟಿಲುಗಳ ಸಹಾಯದಿಂದ ಅನುಕೂಲಕರವಾಗಿ ತಲುಪಬಹುದು. ಬೆಟ್ಟವನ್ನು ಹತ್ತಲು ಕಾಲ್ನಡಿಗೆಯ ಏಕೈಕ ಮಾರ್ಗವಾಗಿದೆ.
ಗಜಾಸುರ ಎಂಬ ಅಸುರರ ಸಂಹಾರಕ್ಕಾಗಿ, ಕಾಶಿ ಕ್ಷೇತ್ರದಿಂದ ವಿಶ್ವೇಶ್ವರ ದೇವರು ಇಲ್ಲಿಗೆ ಬಂದು ಗಜಾಸುರನನ್ನ ಸಂಹಾರ ಮಡಿದ ನಂತರ ಭಕ್ತರ ಇಷ್ಟಾರ್ಥದಂತೆ ಉದ್ಭವ ಲಿಂಗದಂತೆ ಇಲ್ಲಿ ನೆಲೆಸಿದರೆ. ಈ ಲಿಂಗವನ್ನೇ ಕಾಲಕಾಲೇಶ್ವರ ಎಂದು ಕರೆಯಲಾಗುತ್ತದೆ. ಈ ದೇವರು ನೆಲೆಸಿರುವ ಏಕಶಿಲಾ ಬಂಡೆಯ ಗುಡ್ಡವನ್ನು ಕಳಕಪ್ಪದ ಗುಡ್ಡ ಎಂದು ಕರೆಯುತ್ತಾರೆ.
ಭೇಟಿ ನೀಡಿ