ಕಪ್ಪತಗುಡ್ಡ

ಕಪ್ಪತಗುಡ್ಡವು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯಲ್ಲಿ ಇದೆ. ಇದು ಏಷ್ಯಾ ಖಂಡದಲ್ಲಿಯೇ ಶುದ್ಧವಾದ ಗಾಳಿಗೆ ಪ್ರಸಿದ್ದಿ ಪಡೆದಿದೆ. ಉತ್ತರ ಕರ್ನಾಟಕದಲ್ಲಿರುವ ಈ ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಣೆ ಮಾಡಲಾಗಿದೆ. ಮುಂಗಾರು ಅವಧಿಯಲ್ಲಿ ಕಪ್ಪತಗುಡ್ಡ ಇನ್ನಷ್ಟು ಆಕರ್ಷಕವಾಗಿ ಕಾಣಲಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

ಕಪ್ಪತಗುಡ್ಡವು ಬೆಂಗಳೂರಿನಿಂದ 361 ಕಿಮೀ ಮತ್ತು ಗದಗ ನಗರದಿಂದ 30 ಕಿಮೀ ದೂರದಲ್ಲಿದೆ.

ವಯಸ್ಕರಿಗೆ ಪ್ರವೇಶ ಶುಲ್ಕ Rs.25/- ಮತ್ತು ಮಕ್ಕಳಿಗೆ (7 ರಿಂದ 14 ವರ್ಷ) Rs.10/- ಪ್ರವೇಶ ಶುಲ್ಕವಿದೆ. ಸ್ಟಿಲ್ ಕ್ಯಾಮರಾ (200 ಎಂಎಂ ಲೆನ್ಸ್‌ ಬಿಲೋ) Rs.100/- ಮತ್ತು ಸ್ಟಿಲ್ ಕ್ಯಾಮರಾ (200 ಎಂಎಂ ಲೆನ್ಸ್‌ ಎಬೋ) Rs.200/- ಶುಲ್ಕವಿದೆ. ವಿಡಿಯೋಗ್ರಫಿಗೆ (ಮುಂಚಿತವಾಗಿ ಪರವಾನಿಗೆ ಪಡೆಯಬೇಕು) ಶುಲ್ಕ Rs.500/- ಆಗಿದೆ.

ಕಪ್ಪತಗುಡ್ಡಕ್ಕೆ ಆಗಮಿಸುವ ದ್ವಿಚಕ್ರ ವಾಹನ ಸವಾರರು Rs.50/- ರೂ. ಶುಲ್ಕ ಹಾಗೂ ಲಘು ವಾಹನ (ಕಾರು, ಜೀಪ್) Rs.100/- ರೂ. ಶುಲ್ಕವನ್ನು ಪಾವತಿ ಮಾಡಬೇಕು.

ಕಪ್ಪತಗುಡ್ಡವು ಖನಿಜ ನಿಕ್ಷೇಪಗಳು ಸುರಕ್ಷಿತವಾಗಿವೆ. ಈ ಗುಡ್ಡವು ಗದಗ ತಾಲೂಕಿನ ಬಿಂಕದಕಟ್ಟಯಿಂದ ಮುಂಡರಗಿ ತಾಲೂಕಿನ ಶಿಂಗಟಾಲೂರು ತನಕ ಮೂರು ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 65 ಕಿ. ಮೀ. ಪ್ರದೇಶದಲ್ಲಿ ಕಪ್ಪತ್ತಗುಡ್ಡ ಹರಡಿಕೊಂಡಿದೆ.

ಭೇಟಿ ನೀಡಿ
ಮುಂಡರಗಿ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಗದಗ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section