ಕಪ್ಪತಗುಡ್ಡ

ಕಪ್ಪತಗುಡ್ಡವು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನಲ್ಲಿ ಇರುವ ಏಷ್ಯಾ ಖಂಡದಲ್ಲಿಯೇ ಶುದ್ಧವಾದ ಗಾಳಿಗೆ ಪ್ರಸಿದ್ಧಿ ಪಡೆದ ಸ್ಥಳವಾಗಿದೆ. ಉತ್ತರ ಕರ್ನಾಟಕದಲ್ಲಿರುವ ಈ ಕಪ್ಪತಗುಡ್ಡವನ್ನು ವನ್ಯಜೀವಿಧಾಮವಾಗಿ ಘೋಷಿಸಲಾಗಿದೆ. ಮುಂಗಾರು ಅವಧಿಯಲ್ಲಿ ಕಪ್ಪತಗುಡ್ಡ ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ ಮತ್ತು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.

ಕಪ್ಪತಗುಡ್ಡದ ದೂರಗಳು

  • ಬೆಂಗಳೂರು – 373 ಕಿ.ಮೀ
  • ಗದಗ – 30 ಕಿ.ಮೀ
  • ಮುಂಡರಗಿ – 34 ಕಿ.ಮೀ
  • ಗದಗ ಬೈಪಾಸ್ ರೈಲ್ವೆ ನಿಲ್ದಾಣ – 35 ಕಿ.ಮೀ

ಕಪ್ಪತಗುಡ್ಡಕ್ಕೆ ಆಗಮಿಸುವ ದ್ವಿಚಕ್ರ ವಾಹನ ಸವಾರರು ರೂ. 50 ಶುಲ್ಕ ಹಾಗೂ ಲಘು ವಾಹನಗಳು (ಕಾರು, ಜೀಪ್) ರೂ. 100 ಶುಲ್ಕವನ್ನು ಪಾವತಿಸಬೇಕು.

ಕಪ್ಪತಗುಡ್ಡದ ಖನಿಜ ನಿಕ್ಷೇಪಗಳು ಸುರಕ್ಷಿತವಾಗಿವೆ. ಈ ಗುಡ್ಡವು ಗದಗ ತಾಲೂಕಿನ ಬಿಂಕದಕಟ್ಟಿಯಿಂದ ಮುಂಡರಗಿ ತಾಲೂಕಿನ ಶಿಂಗಟಾಲೂರುತನಕ ಮೂರು ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 65 ಕಿ.ಮೀ ಪ್ರದೇಶದಲ್ಲಿ ಹರಡಿಕೊಂಡಿದೆ.

ಭೇಟಿ ನೀಡಿ
ಮುಂಡರಗಿ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಗದಗ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section