ಶಾಂತಗಿರಿ ಕೋಟೆಯು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನಲ್ಲಿ ಇರುವ ಒಂದು ಐತಿಹಾಸಿಕ ಕೋಟೆಯಾಗಿದೆ. ಈ ಕೋಟೆಯು ಒಂದು ರೀತಿಯ ಹಳ್ಳಿಯಾಗಿದ್ದು ಗ್ರಾಮದಿಂದ ಸ್ವಲ್ಪ ದೂರದಲ್ಲಿ ಕಡಿದಾದ, ಇಳಿಜಾರು ಮತ್ತು ಯಾವುದೇ ಸರಿಯಾದ ದಾರಿಯಿಲ್ಲದ ಬೆಟ್ಟದ ಮೇಲೆ ನಿರ್ಮಿತವಾದ ಕೋಟೆಯಾಗಿದೆ. ಇದು ಮರಾಠ ದೊರೆ ಛತ್ರಪತಿ ಶಿವಾಜಿಯು ನಿರ್ಮಿಸಿದ ಕೋಟೆಯಾಗಿದೆ. ಇದು ಚಾರಣ ಮತ್ತು ಪುರಾತನ ಕೋಟೆಗಳ ಅನ್ವೇಷಣೆಯಲ್ಲಿರುವರಿಗೆ ಸಂತೋಷವನ್ನು ನೀಡುತ್ತದೆ.
ಈ ಕೋಟೆಯು ಬೆಂಗಳೂರಿನಿಂದ 434 ಕಿ.ಮೀ, ಹುಬ್ಬಳ್ಳಿ ನಗರದಿಂದ 104 ಕಿ.ಮೀ ಮತ್ತು ಗದಗ ನಗರದಿಂದ 61 ಕಿ.ಮೀ ದೂರದಲ್ಲಿದೆ. ಹಾಗೂ ಗಜೇಂದ್ರಗಡ ನಗರದಿಂದ ಕೇವಲ 22 ಕಿ.ಮೀ ಮತ್ತು ಗದಗ ರೈಲ್ವೆ ನಿಲ್ದಾಣದಿಂದ 59 ಕಿ.ಮೀ ದೂರದಲ್ಲಿದೆ.
ಶಾಂತಗಿರಿ ಕೋಟೆಯ ಪಾಳು ಬಿದ್ದಿರುವ ಕೋಟೆಯ ವಿನ್ಯಾಸ ಮತ್ತು ಅದರ ಅಲಂಕಾರಿಕ ವಿಧಾನಗಳು ನೋಡಲು ಮನಮೋಹಕವಾಗಿದೆ. ಕೋಟೆಯ ಯೋಜನೆ ಇದು ಬೆಟ್ಟದ ತುದಿಯ ಒಂದು ಮೂಲೆಯಲ್ಲಿದೆ. ಆಯಕಟ್ಟಿನ ಸ್ಥಳವು ಸುತ್ತಮುತ್ತಲಿನ ಬಯಲು ಪ್ರದೇಶ ಮತ್ತು ಬೆಟ್ಟದ ಎರಡು ಭಾಗದ ಗೋಡೆಯ ನೋಟವನ್ನು ನೀಡುತ್ತದೆ.
ಈ ಕೋಟೆಯ ಉಳಿದಿರುವ ಪ್ರಮುಖ ಭಾಗಗಳೆಂದರೆ ಒಂದು ಬಾವಿ ಮತ್ತು 3 ಬುರುಜುಗಳು. ಎರಡು ಬುರುಜುಗಳು ವೃತ್ತಾಕಾರವಾಗಿದ್ದರೆ ಮತ್ತು ಮೂರನೆಯದು ಚೌಕಾಕಾರವಾಗಿದೆ. ಮುಖ್ಯ ಕೋಟೆಯ ಎರಡು ಗೋಡೆಗಳಲ್ಲಿ, ಎಡ ಮತ್ತು ಬಲ ಕ್ರಮವಾಗಿ ಸುಮಾರು 85 ಮೀಟರ್ ಮತ್ತು 117 ಮೀಟರ್ ಉದ್ದವಿದೆ.
ಚೌಕಾಕಾರದ ಬುರುಜು ಕೋಟೆಯ ಗೋಡೆಗಿಂತ ಹೆಚ್ಚು ಎತ್ತರವಾಗಿದೆ. ತಳದಲ್ಲಿ ಕಿರಿದಾದ ಬಾಗಿಲು ಮತ್ತು ಮೇಲ್ಭಾಗದಲ್ಲಿ ಬಾಲ್ಕನಿಯ ಮುಂಚಾವಿಕೆ ಬಾಗಿಲು ಇದೆ. ಮಾರ್ಗವು ಎಷ್ಟು ಕಿರಿದಾಗಿದೆ ಎಂದರೆ ತೆಳ್ಳಗಿನ ವ್ಯಕ್ತಿ ಮಾತ್ರ ಅದನ್ನು ಪ್ರವೇಶಿಸಬಹುದು. ರಚನೆಯು ಕನಿಷ್ಠ 08 ಅಡಿ ಎತ್ತರವಿದೆ ಮತ್ತು ಮೇಲಿನ ಗೋಡೆಯು ಸಂಪೂರ್ಣವಾಗಿ ಕುಸಿದಿದೆ. ಕೇಂದ್ರ ಗೋಪುರ ಮತ್ತು ಮತ್ತೆರಡು ಬುರುಜುಗಳನ್ನು ಸಂಪರ್ಕಿಸಲು ಗೋಡೆಯ ಮೇಲೆ ಮಾರ್ಗವಾಗಿದ್ದು ಅದು ಈಗ ಅಪೂರ್ಣವಾಗಿದೆ.
ಭೇಟಿ ನೀಡಿ