ಅನ್ನ, ಬೇಳೆ, ತರಕಾರಿಗಳು ಮತ್ತು ಮಸಾಲೆಗಳ ಮಿಶ್ರಣವನ್ನು ಬಳಸಿ ತಯಾರಿಸುವ ಬಿಸಿಬೇಳೆ ಬಾತ್ ಇದು ಒಂದು ಸಾಂಪ್ರದಾಯಕ ಪದಾರ್ಥವಾಗಿದ್ದು ಇದು ಆರೋಗ್ಯದಾಯಕವೂ ಆಗಿದೆ. ಇದರಲ್ಲಿ ತರಕಾರಿಗಳನ್ನು ಬಳಸುವುದರಿಂದ ಇದು ನಮ್ಮ ದೇಹಕ್ಕೆ ಪೌಷ್ಟಿಕಾಂಶವನ್ನು ನೀಡುತ್ತದೆ. ಬಿಸಿ ಬೇಳೆ ಬಾತ್ ನಲ್ಲಿ ಬಳಸುವು ಮಸಾಲವನ್ನು ಮನೆಯಲ್ಲಿಯೇ ತಯಾರಿಸುವುದು ಇನ್ನುಉತ್ತಮ ಹಾಗು ಆರೋಗ್ಯದಾಯಕವಾಗಿರುತ್ತದೆ.
ಬಿಸಿ ಬೇಳೆ ಬಾತ್ ಅನ್ನು ಅಕ್ಕಿ, ತರಕಾರಿ , ಬಿಸಿಬೇಳೆಬಾತ್ ಮಸಾಲಾ , ಬೇಳೆ , ಅರಿಸಿನ, ಉಪ್ಪು, ಬೆಲ್ಲ,ತೆಂಗಿನತುರಿ, ಹುಣಿಸಿಹಣ್ಣು, ಟೊಮೊಟೊ, ಈರುಳ್ಳಿ, ಸಾಸಿವೆ , ಜೀರಿಗೆ, ಗೋಡಂಬಿ, ಕರಿಬೇವು ಬಳಸಿ ತಯಾರಿಸುತ್ತಾರೆ. ಮತ್ತು ಬಿಸಿಬೇಳೆಬಾತ್ ಗೆ ಬಳಸುವ ಮಸಾಲೆಯನ್ನು ಕಡಲೆಬೇಳೆ, ಉದ್ದಿನ ಬೇಳೆ, ಕೊತ್ತಂಬರಿ ಬೀಜಗಳು, ಮೆಂತ್ಯ, ಜೀರಿಗೆ, ಕರಿಮೆಣಸು, ಒಣ ಕೆಂಪು ಮೆಣಸಿನಕಾಯಿಗಳು, ಚಕ್ಕೆ ,ಲವಂಗ,ಏಲಕ್ಕಿ, ದಾಲ್ಚಿನ್ನಿ, ಗಸಗಸೆ ಬಳಸಿ ತಯಾರಿಸುತ್ತಾರೆ. ಬಿಸಿಬೇಳೆಬಾತ್ ಅನ್ನು ಖಾರ ಬೂಂದಿಯೊಂದಿಗೆ ತಿನ್ನುವುದು ಉತ್ತಮವಾಗಿರುತ್ತದೆ.