ಬಿಸಿ ಬೇಳೆ ಬಾತ್

ಅನ್ನ, ಬೇಳೆ, ತರಕಾರಿಗಳು ಮತ್ತು ಮಸಾಲೆಗಳ ಮಿಶ್ರಣವನ್ನು ಬಳಸಿ ತಯಾರಿಸುವ ಬಿಸಿಬೇಳೆ ಬಾತ್ ಒಂದು ಸಾಂಪ್ರದಾಯಿಕ ಪದಾರ್ಥವಾಗಿದ್ದು, ಇದು ಆರೋಗ್ಯದಾಯಕವೂ ಆಗಿದೆ. ಇದರಲ್ಲಿ ತರಕಾರಿಗಳನ್ನು ಬಳಸುವುದರಿಂದ ನಮ್ಮ ದೇಹಕ್ಕೆ ಪೌಷ್ಟಿಕಾಂಶವನ್ನು ನೀಡುತ್ತದೆ. ಬಿಸಿಬೇಳೆ ಬಾತ್‌ನಲ್ಲಿ ಬಳಸುವ ಮಸಾಲೆಯನ್ನು ಮನೆಯಲ್ಲಿಯೇ ತಯಾರಿಸುವುದು ಇನ್ನೂ ಉತ್ತಮ ಹಾಗೂ ಆರೋಗ್ಯದಾಯಕವಾಗಿರುತ್ತದೆ.

ಬಿಸಿಬೇಳೆ ಬಾತ್ ಅನ್ನು ಅಕ್ಕಿ, ತರಕಾರಿಗಳು, ಬಿಸಿಬೇಳೆ ಬಾತ್ ಮಸಾಲಾ, ಬೇಳೆ, ಅರಿಶಿನ, ಉಪ್ಪು, ಬೆಲ್ಲ, ತೆಂಗಿನ ತುರಿ, ಹುಣಸೆಹಣ್ಣು, ಟೊಮಾಟೊ, ಈರುಳ್ಳಿ, ಸಾಸಿವೆ, ಜೀರಿಗೆ, ಗೋಡಂಬಿ ಹಾಗೂ ಕರಿಬೇವುಗಳನ್ನು ಬಳಸಿ ತಯಾರಿಸುತ್ತಾರೆ. ಬಿಸಿಬೇಳೆ ಬಾತ್‌ಗೆ ಬಳಸುವ ಮಸಾಲೆಯನ್ನು ಕಡಲೆಬೇಳೆ, ಉದ್ದಿನ ಬೇಳೆ, ಕೊತ್ತಂಬರಿ ಬೀಜಗಳು, ಮೆಂತ್ಯ, ಜೀರಿಗೆ, ಕರಿಮೆಣಸು, ಒಣ ಕೆಂಪು ಮೆಣಸಿನಕಾಯಿಗಳು, ಚಕ್ಕೆ, ಲವಂಗ, ಏಲಕ್ಕಿ, ದಾಲ್ಚಿನ್ನಿ ಮತ್ತು ಗಸಗಸೆಯನ್ನು ಬಳಸಿ ತಯಾರಿಸುತ್ತಾರೆ. ಬಿಸಿಬೇಳೆ ಬಾತ್ ಅನ್ನು ಖಾರದ ಬೂಂದಿಯೊಂದಿಗೆ ತಿನ್ನುವುದು ಉತ್ತಮವಾಗಿದೆ.

Read Also
ಕರ್ನಾಟಕದ ಇತರೆ ತಿನಿಸುಗಳು


Responsive Services Section

Read Also


Responsive Services Section