ಧಾರವಾಡ ಪೇಡವು ಕರ್ನಾಟಕ ರಾಜ್ಯದ ಹುಬ್ಬಳ್ಳಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಪ್ರಸಿದ್ಧವಾದ ಸಿಹಿ ತಿಂಡಿಯಾಗಿದೆ. ಈ ಪೇಡವು ದೇಶದಾದ್ಯಂತ ಪ್ರಸಿದ್ಧಿಯನ್ನೂ ಗಳಿಸಿದೆ. ಹುಬ್ಬಳ್ಳಿಯಲ್ಲಿ ಉತ್ತಮ ದರ್ಜೆಯ ಪೇಡವು ಠಾಕೂರರ ಪೇಡ ಅಂಗಡಿಯಲ್ಲಿ ದೊರೆಯುತ್ತದೆ. ಆಡುಭಾಷೆಯಲ್ಲಿ “ಧಾರವಾಡ ಪೇಡೆ” ಅಥವಾ “ಧಾರವಾಡ ಪೇಡ” ಎಂದು ಕರೆಯಲಾಗುವ ಇದು ಧಾರವಾಡ ನಗರದ ಸ್ವಾದಿಷ್ಠ ಸಿಹಿ ತಿಂಡಿ.
ಠಾಕೂರ ಪೇಡ ಎಂದು ಮೊದಲು ಕರೆಯಲ್ಪಡುತ್ತಿದ್ದ ಧಾರವಾಡ ಪೇಡಕ್ಕೆ ಸುಮಾರು ಒಂದೂವರೆ ಶತಮಾನದಷ್ಟು ಸುದೀರ್ಘ ಇತಿಹಾಸವಿದೆ. ಇತರೆ ಪೇಡಗಳಿಗೆ ಹೋಲಿಸಿದರೆ ಇದು ತೀರ ಭಿನ್ನವಾಗಿದ್ದು, ತನ್ನದೇ ಆದ ವಿಶಿಷ್ಟ ರುಚಿ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ.
ಶತಮಾನಗಳ ಹಿಂದೆ ಉತ್ತರ ಭಾರತದ ಲಕ್ನೋ ನಗರದಿಂದ ವಲಸೆ ಬಂದ ಥಾಕೂರ್ ಪರಿವಾರ ಜೀವನೋಪಾಯಕ್ಕಾಗಿ ಪಾರಂಪರಿಕವಾಗಿ ಇದ್ದ ಪೇಡ ತಯಾರಿಕೆಯನ್ನು ಧಾರವಾಡದಲ್ಲಿ ಮುಂದುವರಿಸಿದರು. ಮೊದಲು “ಠಾಕೂರ ಪೇಡ” ಎಂದು ಮಾರಾಟವಾಗುತ್ತಿದ್ದ ಈ ಸಿಹಿ ತಿನಿಸು, ಕಾಲಕ್ರಮದಲ್ಲಿ “ಧಾರವಾಡ ಪೇಡ” ಎಂಬ ಹೆಸರಿನಿಂದ ಪ್ರಸಿದ್ಧಿ ಗಳಿಸಿತು. ಕೇವಲ ಉತ್ತಮ ರುಚಿ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡು ಬಂದ ಇದು ಈಗ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲೂ ಹೆಸರು ಪಡೆದಿದೆ.
Read Also