ಮೈಸೂರು ರಸಂ

ಕರ್ನಾಟಕದಲ್ಲಿ ಟೊಮಾಟೊ ಸಾರು ಎಂದು ಖ್ಯಾತಿ ಹೊಂದಿರುವ ಈ ಮೈಸೂರು ರಸಂ ಒಂದು ಸಂಪ್ರದಾಯಿಕ ಆಹಾರವಾಗಿದೆ. ಮದುವೆ ಹಾಗೂ ಇತರೆ ಹಬ್ಬಗಳಲ್ಲಿ ತುಂಬ ವಿಶೇಷವಾಗಿ ತಯಾರಿಸುವ ಈ ಮೈಸೂರು ರಸಂ ಆರೋಗ್ಯದಾಯಕವೂ ಹೌದು. ಗಮಗಮ ಸುವಾಸನೆಳ್ಳ ಈ ರಸಂ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದನ್ನು ಅನ್ನದೊಂದಿಗೆ ಸೇವಿಸಲಾಗುತ್ತದೆ ಮತ್ತು ಈ ರಸವನ್ನು ಹಾಗೆಯೇ ಕುಡಿಯಬಹುದಾಗಿದೆ.

ಈ ರಸಂಗೆ ಬಳಸಿರುವ ಎಲ್ಲ ಪದಾರ್ಥಗಳೂ ಆರೋಗ್ಯದಾಯಕವಾಗಿವೆ. ಮೈಸೂರು ರಸಂ ಅನ್ನು ದಾಲ್, ಟೊಮಾಟೊ, ತೆಂಗಿನಕಾಯಿ, ಮೈಸೂರು ರಸಂ ಪುಡಿ ಅಥವಾ ಸಾರಿನ ಪುಡಿ, ಹುಣಸೆಹಣ್ಣು, ಬೆಲ್ಲ ಮತ್ತು ಉಪ್ಪು ಬಳಸಿಕೊಂಡು ತಯಾರಿಸುತ್ತಾರೆ. ಹಾಗೆಯೇ ರಸಂ ಪುಡಿ ಅಥವಾ ಸಾರಿನ ಪುಡಿಯನ್ನು ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜಗಳು, ಜೀರಿಗೆ, ಮೆಂತ್ಯ ಕಾಳುಗಳು, ಮೆಣಸು, ಇಂಗು ಮತ್ತು ಸಾಸಿವೆ ಕಾಳುಗಳನ್ನು ಬಳಸಿ ತಯಾರಿಸುತ್ತಾರೆ.