ಮದ್ದೂರು ವಡೆ

ಕಜ್ಜಾಯ ಆಕಾರದಲ್ಲಿರುವ ಈ ಮದ್ದೂರು ವಡೆ ಮಂಡ್ಯ ಜಿಲ್ಲೆಯ ಮದ್ದೂರು ಎಂಬ ಊರಿನಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ತುಂಬ ರುಚಿಯಾಗಿರುವ ಈ ಮದ್ದೂರು ವಡೆಯನ್ನು ಅಕ್ಕಿ ಹಿಟ್ಟು, ರವೆ ಮತ್ತು ಮೈದಾ, ಇರುಳಿ, ಕರಿಬೇವು, ಕೊಬ್ಬರಿ ಮತ್ತು ಇಂಗು ಬಳಸಿ ತಯಾರಿಸಲಾಗುತ್ತದೆ.

ತುಂಬ ಇಷ್ಟ ಪಟ್ಟು ತಿನ್ನುವ ಗರಂ ಗರಂ ಎನ್ನುವ ತಿನಿಸು ಇದಾಗಿದೆ .ಕರ್ನಾಟಕ ಒಂದೂ ಪ್ರಸಿದ್ಧ ಎಣ್ಣೆಯಲ್ಲಿ ಕರಿದ ಪದಾರ್ಥ ಇದಾಗಿದೆ. ಇದನ್ನು ತಿನ್ನಲು ಸ್ವಲ್ಪ ಖಾರ ಖಾರ ವಾಗಿರುತ್ತದೆ. ಅದರಿಂದ ಇದು ಸುಲಭವಾಗಿ ಎಲ್ಲರ ಪ್ರೀಯ ತಿನಿಸಾಗಿ ಬಿಡುತ್ತದೆ. ಈ ಮದ್ದೂರು ವಡೆಗೆ ಬೆಂಗಳೂರು- ಮೈಸೂರು ರೈಲು ನಿಲ್ದಾಣಗಳಲ್ಲಿ ಅತಿ ಹೆಚ್ಚು ಬೇಡಿಕೆ ಇದೆ.