ಆಲೂ ಬೋಂಡಾ

ಆಲೂಗಡ್ಡೆ ಬೋಂಡವು ಕರ್ನಾಟಕದ ಪ್ರಸಿದ್ದ ರಸ್ತೆ ಬದಿಯ ತಿನಿಸಾಗಿದೆ. ಈ ಮಸಾಲೆಯುಕ್ತ ಆಲೂಗಡ್ಡೆ ಬೋಂಡವನ್ನು ಮುಂಬೈ ಬಟಾಟಾ ವಡ ಅತವಾ ಬಾಂಬೆ ಆಲೂಗಡ್ಡೆ ವಡ ಎಂದು ಕರೆಯಲಾಗುತ್ತದೆ.

ಇದನ್ನು ಮಸಾಲೆಯುಕ್ತ ಪುಡಿಮಾಡಿದ ಆಲೂಗಡ್ಡೆ ಬಾಜಿಯನ್ನು ಉಪಯೋಗಿಸಿ ತಯಾರಿಸಿ ಅದಕ್ಕೆ ಕಡಲೆ ಹಿಟ್ಟನ್ನು ಲೇಪಿಸಿ ಅನಂತರ ಎಣ್ಣೆಯಲ್ಲಿ ಕರಿದು ತಯಾರಿಸಲಾಗುತ್ತದೆ. ತೆಂಗಿನಕಾಯಿ ಚಟ್ನಿಯೊಂದಿಗೆ ಇದನ್ನು ಸೇವಿಸುವುದು ಅತ್ಯಂತ ರುಚಿಕರವಾಗಿರುತ್ತದೆ. ಇದು ನೋಡಲು ಸಣ್ಣ ಚೆಂಡಿನ ಆಕಾರದಲ್ಲಿರುತ್ತದೆ. ಇದರ ರುಚಿಯನ್ನು ಹೆಚ್ಚಿಸಲು ಕೆಲವರು ಕಡಲೆ ಹಿಟ್ಟಿಗೆ ಮಸಾಲೆಯನ್ನು ಹಾಗೂ ಆಲೂಗಡ್ಡೆ ಬಾಜಿಗೆ ಬಟಾಣಿಯನ್ನು ಸೇರಿಸುತ್ತಾರೆ.