ಚಂದ್ರವಳ್ಳಿಯು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯಲ್ಲಿ ಇರುವ ಇತಿಹಾಸಪೂರ್ವ ತಾಣವಾಗಿದ್ದು, ಹಲವಾರು ವಿಚಾರಗಳ ಗಣಿಯಾಗಿದೆ. ಈ ಸ್ಥಳವು ನೋಡಲು ಅರ್ಧ ಚಂದ್ರಾಕೃತಿಯಲ್ಲಿ ಇರುವುದರಿಂದ ಈ ಸ್ಥಳಕ್ಕೆ ಚಂದ್ರವಳ್ಳಿ ಎಂದು ಹೆಸರು ಬಂದಿದೆ.
ಇಲ್ಲಿ ಕರ್ನಾಟಕದ ಮೊದಲ ಶಾಸನವಿದ್ದು, ಈ ಶಾಸನವು ಸಂಸ್ಕೃತದಲ್ಲಿ ಇರುವ ಶಾಸನವಾಗಿದೆ ಹಾಗೂ ಅದು ಕದಂಬರ ಸ್ಥಾಪಕ ದೊರೆ ಮಯೂರ ವರ್ಮನನ್ನು ಉಲ್ಲೇಖಿಸುತ್ತದೆ. ಹಾಗೆಯೇ ಇಲ್ಲಿನ ಗುಹೆ ಆಶ್ಚರ್ಯ ಹಾಗೂ ವೈಶಿಷ್ಟಗಳ ಗೂಡಾಗಿದೆ. ಇದರ ರಚನೆ ಒಂದೇ ಕಲ್ಲು ಬಂಡೆ ಕೊರೆದು ಮಾಡಲಾಗಿದೆ. ಅಲ್ಲದೇ ಚಂದ್ರವಳ್ಳಿ ನವ ಶಿಲಾಯುಗದ ಕುರುಹು ಒಳಗೊಂಡಂತೆ ಸಿಂಧೂ ಸಂಸ್ಕೃತಿ ಸಮಕಾಲೀನ ನಾಗರೀಕತೆ ಹಾಗೂ ಇಲ್ಲಿ ದೊರೆತಿರುವ ನಾಣ್ಯಗಳಿಂದ ಕ್ರಿಸ್ತ ಪೂರ್ವ ಕಾಲದಲ್ಲಿ ಚೀನಾ ಹಾಗೂ ಆಗಸ್ಟಸ್ ಸೀಸರ್ ಕಾಲದಲ್ಲಿ ರೋಮ್ ನೊಂದಿಗೆ ಇಲ್ಲಿನ ಜನರು ಸಂಪರ್ಕ ಸಾಧಿಸಿದ್ದರು ಎಂದು ತಿಳಿದುಬರುತ್ತದೆ.
ಈ ಸ್ಥಳವು ಬೆಂಗಳೂರಿನಿಂದ 205 ಕಿ.ಮೀ ದೂರದಲ್ಲಿದೆ ಮತ್ತು ಚಿತ್ರದುರ್ಗದಿಂದ 03 ಕಿ.ಮೀ ದೂರದಲ್ಲಿದೆ. ಹಾಗೂ ಚಿತ್ರದುರ್ಗ ನಗರ ರೈಲ್ವೆ ನಿಲ್ದಾಣದಿಂದ ಕೇವಲ 06 ಕಿ.ಮೀ ದೂರದಲ್ಲಿದೆ.
ಚಂದ್ರವಳ್ಳಿಯ ಸ್ಥಳ ಪುರಾಣ
ಈ ಸ್ಥಳವು ನೋಡಲು ಅರ್ಧ ಚಂದ್ರಾಕೃತಿಯಲ್ಲಿ ಇರುವುದರಿಂದ ಈ ಸ್ಥಳಕ್ಕೆ ಚಂದ್ರವಳ್ಳಿ ಎಂದು ಹೆಸರು ಬಂದಿದೆ. ಕಾರಣ ಚಿತ್ರದುರ್ಗ ಗುಡ್ಡ, ಕಿರುಬನ ಕಲ್ಲು ಮತ್ತು ಜೋಳ ಗುಡ್ಡ ಈ ಮೂರೂ ಗುಡ್ಡಗಳನ್ನು ದೂರದಿಂದ ನೋಡಿದಾಗ ಅರ್ಧ ಚಂದ್ರಾಕೃತಿಯಲ್ಲಿ ಇದೆ.
ಚಂದ್ರವಳ್ಳಿ ಶಾಸನ
ಚಂದ್ರವಳ್ಳಿ ಶಾಸನವು ಕರ್ನಾಟಕದಲ್ಲಿ ಮಹತ್ವಪೂರ್ಣ ಹೊಂದಿರುವ ಶಾಸನವಾಗಿದೆ. ಈ ಶಾಸನವನ್ನು ಕರ್ನಾಟಕದ ಮೊಟ್ಟ ಮೊದಲ ಮನೆತನವಾದ ಕದಂಬ ವಂಶದ ರಾಜ ಮಯೂರವರ್ಮ ನಿಂದ ಹೊರಡಿಸಲ್ಪಟ್ಟ ಏಕೈಕ ಶಾಸನವಾಗಿದೆ.
ಈ ಮಯೂರವರ್ಮನ ಅಧಿಕಾರ ಕಾಲಾವಧಿ ಕ್ರಿಸ್ತಶಕ 345 ರಿಂದ ಕ್ರಿಸ್ತಶಕ 360. ಈ ಶಾಸನವನ್ನು ಕ್ರಿಸ್ತಶಕ 340 ರಿಂದ ಕ್ರಿಸ್ತಶಕ 345 ರ ಅವಧಿಯಲ್ಲಿ ಹೊರಡಿಸಿರಬಹುದೆಂದು ಇತಿಹಾಸ ತಜ್ಞರ ಅಭಿಪ್ರಾಯ. ಕಾರಣ ಈ ಶಾಸನದಲ್ಲಿ ಮಯೂರವರ್ಮನನ್ನು ರಾಜ ಎಂದು ವರ್ಣಿಸಿಲ್ಲ. ಈ ಶಾಸನವು ಪ್ರಾಕೃತ (ಸಂಸ್ಕೃತ) ಭಾಷೆಯಲ್ಲಿದೆ ಹಾಗೂ ಈ ಶಾಸನವು ಬ್ರಾಹ್ಮಿ ಲಿಪಿಯಲ್ಲಿದೆ.
ಈ ಶಾಸನದ ಬಗ್ಗೆ ಮೊದಲು 1929 ರಲ್ಲಿ Dr. ಎಂ.ಎಚ್. ಕೃಷ್ಣ ಅವರು ಸಂಶೋಧನೆ ಮಾಡಿದರು ಹಾಗೂ ಅದರ ಒಂದು ಪ್ರತಿ ತೆಗೆದು ಮೈಸೂರು ಪುರಾತತ್ವ ಇಲಾಖೆಯ ವಾರ್ಷಿಕ ಮ್ಯಾಗಜಿನ್‌ನಲ್ಲಿ ಬಿಡುಗಡೆ ಮಾಡಿದರು.
ನಂತರದ ಕಾಲದಲ್ಲಿ ಮೈಸೂರು ಪುರಾತತ್ವ ಇಲಾಖೆಯ ವಾರ್ಷಿಕ ಮ್ಯಾಗಜಿನ್‌ನಲ್ಲಿ ಬಿಡುಗಡೆಯಾದ ಲೇಖನದ ಬಗ್ಗೆ M ಗೋವಿಂದ ಪೈ, Dr. ಪಿ ಬಿ ದೇಸಾಯಿ, Dr. ಕೆ ಪಿ ಜೈಸ್ವಾಲ್ ಮತ್ತು ನೀಲಕಂಠ ಶಾಸ್ತ್ರಿಗಳು ತಿದ್ದುಪಡಿ ಕೇಳುತ್ತಾರೆ.
1986 ರಲ್ಲಿ M S ಕೃಷ್ಣ ಅವರು ಈ ಶಾಸನದ ಬಗ್ಗೆ ಮರು ವಿಶ್ಲೇಶಣೆ ಮಾಡಿ ನೀಡಿರುವ ಮಾಹಿತಿ.
ಬ್ರಾಹ್ಮಿ ಲಿಪಿ

ಸಂಸ್ಕೃತ
ಕದಂಬಾಣಂ ಮಯೂರವರ್ಮಣಾ
ತಟಾಕಂ ದೃಢಂಕೃತಂ ಅಭಿರುಪಂ ರ(ಚ)ಯಿತ್ವಾ
ವಾನ(ವಾ)ಸಕಂ ಸ್ಥಾಪಯಿತ್ವಾ ಕುಪಣಚ(ಮಾ)
ಹುಲಿಗುಂದಿ ದೇವಾಲಯ
ಚಂದ್ರವಳ್ಳಿಯನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಹುಲಿಗುಂದಿ, ಪರಳಗುಂದಿ, ನೆರಳಗುಂದಿ ಮತ್ತು ಬಸವನಗುಂದಿ. ಚಂದ್ರವಳ್ಳಿ ಶಾಸನವು ದೊರೆತಿರುವುದು ಈ ಹುಲಿಗುಂದಿ ವಿಭಾಗದಲ್ಲಿ. ಚಂದ್ರವಳ್ಳಿ ಶಾಸನವು ಒಂದು ಬಂಡೆಯ ಮೇಲೆ ಇದ್ದು ಇದರ ಪಕ್ಕದಲ್ಲಿ ಪುರಾತನ ಸಿದ್ದೇಶ್ವರ ದೇವಾಯವಿದೆ. ಈ ದೇವಾಲಯವನ್ನು ಭೈರವೇಶ್ವರ ದೇವಾಲಯ ಎಂದು ಸಹ ಕರೆಯುತ್ತಾರೆ.
ಚಂದ್ರವಳ್ಳಿ ಕೆರೆ
ಈ ಕೆರೆಯು ಕ್ರಿಸ್ತಶಕ 03ನೇ ಶತಮಾನಕ್ಕಿಂತಲೂ ಹಳೆಯದಾದ ಕೆರೆಯಾಗಿದೆ. ಈ ಕೆರೆಯು ಕದಂಬ ವಂಶದ ಮಯೂರ ವರ್ಮನು ಕಾಲಕ್ಕೆ ನಿಕಟ ಸಂಬಂಧ ಹೊಂದಿದೆ. ಕದಂಬ ವಂಶದ ಮಯೂರವರ್ಮನು ಕ್ರಿಸ್ತಶಕ 04ನೇ ಶತಮಾನದಲ್ಲಿ ಅಭಿರುದ್ದಿ ಪಡಿಸಿದ್ದಾನೆಂದು ಇತಿಹಾಸಕಾರರ ಅಭಿಪ್ರಾಯ.
ಚಂದ್ರವಳ್ಳಿ ಗುಹೆ
ಈ ಗುಹೆಯಲ್ಲಿ ಶಿವಲಿಂಗವಿರುವ ಪೂಜಾ ಸ್ಥಳ , ಡ್ರಾಯಿಂಗ್ ರೂಮ್, ಮಲಗುವ ಕೋಣೆ ಮತ್ತು ಒಳಗಿನ ಟ್ಯಾಂಕ್‌ಗೆ ಸಂಪರ್ಕಿಸುವ ನೀರಿನ ಹೊರಹರಿವು ಮುಂತಾದ ಹಲವು ಕೋಣೆಗಳಿವೆ.
ಅಂಕಲಿ ಮಠ
ಚಂದ್ರವಳ್ಳಿ ಗುಹಾ ದೇವಾಲಯ (ಅಂಕಲಿ ಮಠ ಎಂದೂ ಕರೆಯುತ್ತಾರೆ – ಅಂಕಲಗಿ ಚಂದ್ರವಳ್ಳಿಯು ಪೂರ್ವ-ಐತಿಹಾಸಿಕ ಪುರಾತತ್ತ್ವ ಶಾಸ್ತ್ರದ ಸ್ಥಳವಾಗಿದೆ). ಚಂದ್ರವಳ್ಳಿ ಗುಹೆಯ ಪಕ್ಕದಲ್ಲಿ ಇರುವ ಈ ಗುಹಾ ದೇವಾಲಯದ ಒಳಗೆ ಒಂದು ದೊಡ್ಡ ಲಿಂಗವಿದೆ. ಹಾಗೂ ಈ ಗುಹೆಯ ಲಿಂಗದ ಬಲಭಾಗಲ್ಲಿ 4 ಲಿಂಗಗಲ್ಲೂ ಮತ್ತು ಎಡಭಾಗದಲ್ಲಿ 3 ಲಿಂಗಗಳಿವೆ.
ಭೇಟಿ ನೀಡಿ