ದೊಡ್ಡಹೊಟ್ಟೆ ಶ್ರೀ ರಂಗನಾಥಸ್ವಾಮಿ ಬೆಟ್ಟವು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಲೋಕದೊಳಲು ಗ್ರಾಮದ ಬಳಿ ಇರುವ ಪ್ರಸಿದ್ಧ ಪವಿತ್ರ ಸ್ಥಳವಾಗಿದೆ. ಇಲ್ಲಿ ಬೆಟ್ಟದ ಮೇಲೆ ಉದ್ಭವ ಮೂರ್ತಿ ಆಂಜನೇಯ ಸ್ವಾಮಿ ದೇವಾಲಯ ಮತ್ತು ಲೋಕದೊಳಲು ಅಂದರೆ ಬೆಟ್ಟದ ಕೆಳಗೆ ಗ್ರಾಮದಲ್ಲಿ ಉತ್ಸವ ಮೂರ್ತಿ ದೇವಾಲಯವಿದೆ, ಇದು ಭಕ್ತರ ನಂಬಿಕೆ ಮತ್ತು ಭಕ್ತಿಭಾವದ ಕೇಂದ್ರವಾಗಿದೆ.
ಈ ದೇವಾಲಯವು ಬೆಂಗಳೂರಿನಿಂದ 235 ಕಿ.ಮೀ ದೂರದಲ್ಲಿದೆ ಮತ್ತು ಚಿತ್ರದುರ್ಗದಿಂದ 45 ಕಿ.ಮೀ ದೂರದಲ್ಲಿದೆ. ಹಾಗೂ ಹೊಳಲ್ಕೆರೆ ನಗರದಿಂದ 13 ಕಿ.ಮೀ ಮತ್ತು ಹೊಳಲ್ಕೆರೆ ರೈಲ್ವೆ ನಿಲ್ದಾಣದಿಂದ ಕೇವಲ 18 ಕಿ.ಮೀ ದೂರದಲ್ಲಿದೆ.
ಬೆಟ್ಟದ ಮೇಲೆ ಇರುವ ದೇವಾಲಯವು ವಿಶಿಷ್ಟ ಶೈಲಿಯಲ್ಲಿದ್ದು, ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯದಿಂದ ಕೂಡಿದೆ. ಬೆಟ್ಟದ ಮೇಲೆ ಇರುವ ಸುಮಾರು ೨ ಸಾವಿರ ಇತಿಹಾಸವನ್ನು ಹೊಂದಿದೆ. ಇಲ್ಲಿ ಸ್ಥಾಪಿಸಲ್ಪಟ್ಟಿರುವ ಶ್ರೀ ರಂಗನಾಥಸ್ವಾಮಿನ ಪ್ರತಿಮೆ ಅತ್ಯಂತ ಶಾಂತ ಸ್ವರೂಪವನ್ನು ಹೊಂದಿದ್ದು, ಭಕ್ತರಿಗೆ ಆಧ್ಯಾತ್ಮಿಕ ನೆಮ್ಮದಿಯನ್ನು ನೀಡುತ್ತದೆ.
ಪ್ರತಿವರ್ಷ ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ವಿಶೇಷವಾಗಿ ರಂಗನಾಥಸ್ವಾಮಿ ಜಾತ್ರೆ ಸಂದರ್ಭದಲ್ಲಿ ಬೆಟ್ಟದಲ್ಲಿ ದೊಡ್ಡ ಮಟ್ಟದ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ.
ಇದು ಧಾರ್ಮಿಕ ಕೇಂದ್ರವಾಗಿರುವುದರ ಜೊತೆಗೆ, ಬೆಟ್ಟ ಏರಿಕೆ ಪಾದಯಾತ್ರೆಯೂ ಪ್ರವಾಸಿಗರಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ. ಬೆಟ್ಟದ ಮೇಲ್ಭಾಗದಲ್ಲಿ ಒಂದು ಸಣ್ಣ ಕೊಳವಿದ್ದು, ಸ್ಥಳೀಯರ ಅಭಿಪ್ರಾಯದ ಪ್ರಕಾರ ಅದು ಸುಮಾರು ೨೦ ಅಡಿ ಆಳ ಹೊಂದಿದೆ. ವರ್ಷದ ಯಾವುದೇ ಕಾಲದಲ್ಲಿಯೂ ಈ ಕೊಳದಲ್ಲಿ ನೀರು ಬತ್ತುವುದಿಲ್ಲವೆಂಬುದು ಇದರ ವಿಶೇಷತೆ. ಬೆಟ್ಟದ ಮೇಲಿನ ಸುತ್ತಮುತ್ತಲಿನ ಹಸಿರು ಪರಿಸರ ಮತ್ತು ಮನಮೋಹಕ ದೃಶ್ಯಾವಳಿಗಳು ಈ ಸ್ಥಳದ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ.
ಭೇಟಿ ನೀಡಿ