ಒಂಟಿಕಂಬದ ಮಠ ಹೊಳಲ್ಕೆರೆ

ಪುರಾತನ ಶ್ರೀ ಒಂಟಿಕಂಬದ ಮುರುಘಾ ಮಠವು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಇರುವ ಸುಂದರ ಆದ್ಯಾತ್ಮಿಕ ಸ್ಥಳ ಹಾಗೂ ಮಲ್ಲಿಕರ್ಜುನ ಮುರುಘರಾಜೇಂದ್ರ ಜಗದ್ಗುರುಗಳ ವಿಶ್ರಾಂತಿ ಸ್ಥಳವಾಗಿದೆ. ಇಲ್ಲಿ ಒಂಟಿಕಲ್ಲಿನ ಮಂಟಪ, ಮಲ್ಲಿಕರ್ಜುನ ಮುರುಘರಾಜೇಂದ್ರ ಜಗದ್ಗುರುಗಳ ಐಕ್ಯವಾದ ಸಮಾಧಿ ಸ್ಥಳ ಮತ್ತು ಪಕ್ಕದಲ್ಲಿ ಸುಂದರ ಪೃಷ್ಕರಣಿ ಇದೆ.

ಈ ಮಠವು ಬೆಂಗಳೂರು ನಿಂದ 239 ಕಿ.ಮೀ ದೂರದಲ್ಲಿದೆ ಮತ್ತು ಚಿತ್ರದುರ್ಗದಿಂದ 30 ಕಿ.ಮೀ ದೂರದಲ್ಲಿದೆ. ಹಾಗೂ ಹೊಳಲ್ಕೆರೆ ನಗರದಿಂದ 02 ಕಿ.ಮೀ ಮತ್ತು ಹೊಳಲ್ಕೆರೆ ರೈಲ್ವೆ ನಿಲ್ದಾಣದಿಂದ ಕೇವಲ 8 ಕಿ.ಮೀ ದೂರದಲ್ಲಿದೆ.

ಒಂಟಿಕಲ್ಲಿನ ಮಂಟಪ

ಒಂಟಿ ಕಂಬದ ಕಲ್ಲಿನ ಮೇಲೆ, ಎಂಟು ಕಂಬಗಳ ಆದರದ ಮೇಲೆ ಅಷ್ಟಾಕೋನ (ಎಂಟು ಭುಜಗಳ್ಳುಲ್ಲ ಯಾವುದಾದರು ವಸ್ತು ಅಥವಾ ಆಕೃತಿ) ಆಕೃತಿಯಲ್ಲಿ ಮಠದ ಮಂಟಪವನ್ನು ನಿರ್ಮಿಸಲಾಗಿದೆ. ಈ ರೀತಿಯ ನಿರ್ಮಾಣ ಉತ್ತರ ಪ್ರದೇಶದ ಆಗ್ರಾ ಬಳಿಯ ಫತೇಪುರ್ ಸಿಕ್ರಿ ಎಂಬಲ್ಲಿ ಇರುವುದು. ಈ ಮಂಟಪವು ಸುಮಾರು 13ನೇ ಶತಮಾನದ್ದು ಎಂದು ಸಿರಾದ ಡಾ. ನಂದೀಶ್ ಎಂಬ ಸಂಶೋಧಕರು ಅಭಿಪ್ರಾಯ ಪಟ್ಟಿದಾರೆ.

ಪೃಷ್ಕರಣಿ

ಇದು ಒಂದು ಸುಂದರ ಪುಷ್ಕರಣಿಯಾಗಿದೆ. ಪೃಷ್ಕರಣಿಯು ಚೌಕಾಕೃತಿಯಲ್ಲಿ ಇದ್ದು, ಇದರ ಅಳವು ಸುಮಾರು 50 ಅಡಿ ಇರಬಹುದೆಂದು ಅಭಿಪ್ರಾಯ. ಆ ಪೃಷ್ಕರಣಿಯು ಸ್ಥಳೀಯ ಗ್ರಾನೈಟ್ ನಿಂದ ನಿರ್ಮಿಸಿದೆ. ಈ ಕೊಳದ ಮೇಲ್ಬಾಗದ ಗೋಡೆಯ ಮೇಲೆ ಉಬ್ಬುಶಿಲ್ಪಗಳ ಕೆತ್ತನೆ ಇದೆ.

ಮಲ್ಲಿಕರ್ಜುನ ಮುರುಘರಾಜೇಂದ್ರ ಸಮಾಧಿ

ಇದು ಹಿಂದಿನ ಚಿತ್ರದುರ್ಗದ ಮಲ್ಲಿಕರ್ಜುನ ಮುರುಘರಾಜೇಂದ್ರ ಸಮಾಧಿ ಸ್ಥಳ. ಮಲ್ಲಿಕಾರ್ಜುನ ಸ್ವಾಮೀಜಿಗಳು ಸುಮಾರು 30 ವರ್ಷಗಳ ಸುದೀರ್ಘ ಕಾಲ ಮುರುಘಾ ಮಠದ ಪೀಠಾಧ್ಯಕ್ಷರಾಗಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಆಧ್ಯಾತ್ಮಿಕವಾಗಿ ಸಮಾಜ ಕಟ್ಟುವ ಕಾರ್ಯ ಮಾಡಿದರು. ಶ್ರೀಗಳು ಹಲವು ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಅವರು ಐಕ್ಯವಾದ ಸ್ಥಳವಾಗಿ ಇಲ್ಲಿ ಸಮಾಧಿ ನಿರ್ಮಿಸಲಾಗಿದೆ.

ಭೇಟಿ ನೀಡಿ
ಹೊಳಲ್ಕೆರೆ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಚಿತ್ರದುರ್ಗ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section