ಮಡಿವಾಳ ಮಾಚಿದೇವರ ಹೊಂಡ

ಮಡಿವಾಳ ಮಾಚಿದೇವರ ಹೊಂಡವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ಇದೆ. ಈ ಪವಿತ್ರ ಸ್ಥಳವು ಶರಣ ಸಂಪ್ರದಾಯದ ಮಹಾನ್ ಶರಣರಾದ ಮಡಿವಾಳ ಮಾಚಿದೇವರಿಗೆ ಸಮರ್ಪಿತವಾಗಿದೆ.

12ನೇ ಶತಮಾನದಲ್ಲಿ ಸಮಾಜದಲ್ಲಿ ದುರ್ಬಲರ ಶೋಷಣೆ, ಜಾತಿ-ತಾರತಮ್ಯ, ಅಸ್ಪೃಶ್ಯತೆ, ಮೂಢನಂಬಿಕೆಗಳು ಹಾಗೂ ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಗಳು ವ್ಯಾಪಕವಾಗಿದ್ದವು. ಈ ಅನ್ಯಾಯದ ವಿರುದ್ಧವಾಗಿ ಶರಣರು ‘ಸಮಪಾಲು–ಸಮಬಾಳು’ ಎಂಬ ತತ್ವದ ಮೂಲಕ ಸಮಾನತೆಯ ಸಮಾಜ ನಿರ್ಮಿಸಲು ಸಾಮಾಜಿಕ ಕ್ರಾಂತಿಯನ್ನು ಪ್ರಾರಂಭಿಸಿದರು.

ಅಂತಹ ಶರಣರ ಅಗ್ರಗಣ್ಯರಲ್ಲಿ ಮಡಿವಾಳ ಮಾಚಿದೇವರು ಪ್ರಮುಖರಾಗಿದ್ದರು. ಅವರು ತಮ್ಮ ಜೀವನದ ಮೂಲಕ ಶ್ರಮನ ಗೌರವ, ಸಮಾನತೆ ಮತ್ತು ಮಾನವ ಸೇವೆಯ ತತ್ವಗಳನ್ನು ಅಳವಡಿಸಿಕೊಂಡು, ಶರಣ ಚಳವಳಿಯ ಇತಿಹಾಸದಲ್ಲಿ ಪ್ರಕಾಶಮಾನ ಸ್ಥಾನವನ್ನು ಪಡೆದಿದ್ದಾರೆ.

ಈ ಸ್ಥಳವು ಬೆಂಗಳೂರಿನಿಂದ 716 ಕಿ.ಮೀ (NH50 ಮೂಲಕ), 730 ಕಿ.ಮೀ (NH44 – ಹೈದರಾಬಾದ್ ಮೂಲಕ), ಬೀದರ್‌ನಿಂದ 81 ಕಿ.ಮೀ ಮತ್ತು ಬಸವಕಲ್ಯಾಣದಿಂದ 2 ಕಿ.ಮೀ ದೂರದಲ್ಲಿದೆ.

ಶ್ರೀ ಅಲ್ಲಮಪ್ರಭು ಅವರ ಗದ್ದಿಗೆ ಮಠದ ಪಕ್ಕದಿಂದ ಹಿಂದೆ ಹೋದರೆ ಮಡಿವಾಳ ಮಾಚಿದೇವರ ಹೊಂಡವನ್ನು ಕಾಣಬಹುದು. ನಾಲ್ಕು ದಿಕ್ಕುಗಳಿಂದ ನೀರು ತುಂಬಿದ್ದು, ಮಧ್ಯದಲ್ಲಿ ಮಡಿವಾಳ ಮಾಚಿದೇವರ ಮಂದಿರವಿದೆ. ನೀರಿನ ಮಧ್ಯದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ, ಇದರಿಂದ ಮಂದಿರಕ್ಕೆ ಸುಲಭವಾಗಿ ಹೋಗಬಹುದಾಗಿದೆ. ಹೊಂಡದ ಸುತ್ತ ದೊಡ್ಡ ಮರಗಳು ಬೆಳೆಯುತ್ತಿವೆ ಮತ್ತು ಪಾದಚಾರಿಗಳಿಗೆ ಸುತ್ತಲೂ ರಸ್ತೆಯೂ ನಿರ್ಮಿಸಲಾಗಿದೆ. ಹೊಂಡವು ವಿಹಂಗಮವಾಗಿ ಸುಂದರವಾಗಿ ಕಾಣುತ್ತದೆ. ಇಲ್ಲಿ ಉಪಹಾರ ಗೃಹ ಮತ್ತು ಮಕ್ಕಳ ಆಟಕ್ಕಾಗಿ ವ್ಯವಸ್ಥೆ ಕೂಡ ಮಾಡಲಾಗಿದೆ. ಈ ಶರಣರು ಮೂಲತಃ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಯವರು.

ಕೆಲವು ಕಾರ್ಯಸೂಚಿಗಳ ಪ್ರಕಾರ ದೇವಾಲಯಗಳನ್ನು ಸಂಪೂರ್ಣವಾಗಿ ಮಾರ್ಪಡಿಸಲಾಗಿದೆ, ಆದರೆ ದೇವಾಲಯದ ಅವಶೇಷಗಳು ಇನ್ನೂ ಉಳಿದಿವೆ. ಇವುಗಳಲ್ಲಿ ಶಿವನ ಲಿಂಗರೂಪ ಮಾತ್ರವಲ್ಲದೆ ಮಾನವರೂಪದ ರೂಪದಲ್ಲಿಯೂ, ಹನುಮಂತ ಮತ್ತು ಅನೇಕ ಶಿಲಾಬಾಲಿಕೆಗಳ ಪ್ರತಿಮೆಗಳೂ ಕಾಣಸಿಗುತ್ತವೆ.

ಭೇಟಿ ನೀಡಿ
ಬಸವಕಲ್ಯಾಣ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೀದರ್ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section