ದೇವ ದೇವ ವನವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲೂಕಿನ ಶಹಾಪೂರ ಪ್ರಾದೇಶಿಕ ಅರಣ್ಯ ವ್ಯಾಪ್ತಿಯಲ್ಲಿ ಇರುವ ಸಸ್ಯಶಾಸ್ತ್ರೀಯ ಉದ್ಯಾನವಾಗಿದೆ. ಈ ವನವು ಬೀದರ್ ನಿವಾಸಿಗಳಿಗೆ ಜನಪ್ರಿಯ ವಾರಾಂತ್ಯದ ತಾಣವಾಗಿದೆ.
ದೇವ ದೇವ ವನದ ದೂರಗಳು
- ಬೆಂಗಳೂರು – 666 ಕಿ.ಮೀ
- ಬೀದರ್ – 9 ಕಿ.ಮೀ
- ಬೀದರ್ ರೈಲ್ವೆ ನಿಲ್ದಾಣ – 7 ಕಿ.ಮೀ
- ಬೀದರ್ ವಿಮಾನ ನಿಲ್ದಾಣ – 10 ಕಿ.ಮೀ
ಈ ಸ್ಥಳವು ಸಾರ್ವಜನಿಕರಿಗೆ ಗುರುವಾರದಿಂದ ಮಂಗಳವಾರ ಮಧ್ಯಾಹ್ನ 1ರಿಂದ ಸಂಜೆ 6ರವರೆಗೆ ತೆರೆಯಲ್ಪಡುತ್ತದೆ, ಬುಧವಾರ ಮುಚ್ಚಲಾಗುತ್ತದೆ. ಪ್ರವೇಶಕ್ಕೆ ನಾಮಮಾತ್ರ ಶುಲ್ಕವಿದೆ.
ಪ್ರವೇಶ ಶುಲ್ಕ
| ವಯಸ್ಕರಿಗೆ | Rs.10/- |
| 5 ರಿಂದ 12 ವರ್ಷದ ಮಕ್ಕಳಿಗೆ | Rs.5/- |
ಈ ಉದ್ಯಾವನದಲ್ಲಿ ನಕ್ಷೆಯ ಫಲಕದಲ್ಲಿ ವಿವಿಧ ಉದ್ಯಾನಗಳ ಸ್ಥಳವನ್ನು ತೋರಿಸುತ್ತದೆ. ದೇವ ದೇವ ವನವು ಕನಿಷ್ಠ 10 ಉದ್ಯಾನಗಳು ಮತ್ತು ಒಂದು ನರ್ಸರಿಯನ್ನು ಒಳಗೊಂಡಿದೆ. ಪಟ್ಟಿ ಇಲ್ಲಿದೆ-
- ಅಶೋಕ ವನ
- ರಾಕ್ ಗಾರ್ಡನ್
- ಔಷಧೀಯ ನರ್ಸರಿ
- ಜಪಾನೀಸ್ ಗಾರ್ಡನ್
- ರೋಸ್ ಗಾರ್ಡನ್
- ಶಿವ ಪಂಚಾಯತ್ ವನ
- ಬ್ರಹತ್ ಪಂಚವಟಿ ವನ
- ರಾಶಿ ವನ
- ಫಲ ಪುಷ್ಪ ವನ
- ನವಗ್ರಹ ವನ
- ನಂದನ ವನ
ಭೇಟಿ ನೀಡಿ







