ಅವರೆಕಾಳು ಅಕ್ಕಿ ರೊಟ್ಟಿ

ಅವರೆಕಾಳು ಇದು ದಿನ ಕಳೆದಂತೆ ತುಂಬಾ ಹೇರಳವಾಗಿ ಸಿಗುವ ಕಾಳು ಆಗಿದೆ. ಅವರೆಕಾಳು ತಿನ್ನೋದ್ರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಜೀರ್ಣಕ್ರಿಯೆಗೆ, ಬೊಜ್ಜನ್ನು ನಿವಾರಿಸಲು, ಹೃದಯದ ಆರೋಗ್ಯಕ್ಕೆ, ರಕ್ತಹೀನತೆ ತಡೆಗಟ್ಟುವಿಕೆಗೆ, ಮೂಳೆಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

ಅವರೆಕಾಳು ಎಷ್ಟು ಆರೋಗ್ಯಕರವೋ ಅವರೆಕಾಳು ರೊಟ್ಟಿ ಸಹ ಅಷ್ಟೇ ರುಚಿಯಾಗಿರುತ್ತದೆ. ಅಕ್ಕಿ ರೊಟ್ಟಿ ಹಾಗು ಅವರೆಕಾಳು ಮಿಶ್ರೀತ ಅವರೆಕಾಳು ರೊಟ್ಟಿಯು ಬೆಂಗಳೂರಿನ ಹೆಸರಾಂತ ಪಾಕವಿಧಾನವಾಗಿದೆ.
ತೆಂಗಿನಕಾಯಿ ಚಟ್ನಿಯು ಅವರೆಕಾಳು ರೊಟ್ಟಿಯ ಬೆಸ್ಟ್ ಕಾಂಬಿನೇಷನ್ ಆಗಿದೆ. ಈ ಅವರೆಕಾಳು ರೊಟ್ಟಿಯನ್ನು ಅಕ್ಕಿ ಹಿಟ್ಟು, ಬೇಯಿಸಿದ ಅವರೆಕಾಳು, ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಎಲೆಗಳು ಹಾಗು ಹಸಿ ಮೆಣಸಿನಕಾಯಿಯನ್ನು ಮಿಶ್ರಣ ಮಾಡಿ ರೊಟ್ಟಿ ತಟ್ಟಿ ಚೆನ್ನಾಗಿ ಬೇಯಿಸಿ ತಯಾರಿಸಲಾಗುತ್ತದೆ.