ಬಡವರ ಬಾಧಾಮಿ ಎಂದು ಕರೆಯಲ್ಪಡುವ ರಾಗಿಯು ಆರೋಗ್ಯ ಮತ್ತು ಆಯಸ್ಸು ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ. ಇದು ಭಾರತದ ಪ್ರಮುಖ ಆಹಾರ ಪದಾರ್ಥವಾಗಿದೆ. ರಾಗಿಯಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಗಳಂತಹ ಅನೇಕ ಪೋಷಕಾಂಶಗಳಿವೆ.100 ಗ್ರಾಂ ರಾಗಿಯಲ್ಲಿ 344 ಮಿಲಿಗ್ರಾಂ ಕ್ಯಾಲ್ಸಿಯಂ ಇರುತ್ತದೆ ಎಂದು ತಿಳಿದುಬಂದಿದೆ.
ರಾಗಿ ಸೇವನೆಯು ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು, ತೂಕವನ್ನು ನಿರ್ವಹಿಸಲು, ಹಸಿವನ್ನು ಹತ್ತಿಕ್ಕಲು ಸಹಾಯ ಮಾಡುತ್ತದೆ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇಷ್ಟೆಲ್ಲ ಉಪಯೋಗವಿರುವ ರಾಗಿಯನ್ನು ರಾಗಿ ರೊಟ್ಟಿಯ ಮೂಲಕ ದಿನನಿತ್ಯ ಸೇವಿಸುವುದು ಕೆಲವರ ಅಭ್ಯಾಸವಾಗಿ ಬಿಟ್ಟಿದ್ದೆ. ಎಷ್ಟೋ ರೋಗಗಳು ನಮಗೆ ಬರದಂತೆ ತಡೆಗಟ್ಟುವ ಈ ರಾಗಿರೊಟ್ಟಿಯು ಅತ್ಯಂತ ರುಚಿಕರವೂ ಹೌದು. ನಾಟಿ ಕೋಳಿ ಸಾರು ಇದರ ಬೆಸ್ಟ್ ಕಾಂಬಿನೇಶನ್ ಆಗಿದೆ. ರಾಗಿ ಹಿಟ್ಟನ್ನು ಉಪ್ಪು ಮತ್ತು ನೀರು ಬೆರೆಸಿ ಚೆನ್ನಾಗಿ ಬೇಯಿಸಲಾಗುತ್ತದೆ. ನಿಮಗೆ ಇಷ್ಟವಿದ್ದರೆ ಹಿಟ್ಟನ್ನು ತಯಾರಿಸುವಾಗ ಕತ್ತರಿಸಿದ ಈರುಳ್ಳಿ, ಕ್ಯಾರಟ್, ಕೊತ್ತಂಬರಿ ಸೊಪ್ಪು ಮತ್ತು ಜೀರಿಗೆ ಸೇರಿಸಬಹುದು. ನಂತರ ರೊಟ್ಟಿ ತಟ್ಟಿ ತವಾದಲ್ಲಿ ಎಣ್ಣೆ ಹರಡಿ ಬೇಯಿಸಲಾಗುತ್ತದೆ. ಅನಂತರ ಚಟ್ನಿಯೊಂದಿಗೆ ರಾಗಿರೊಟ್ಟಿಯನ್ನು ತಿನ್ನಲಾಗುತ್ತದೆ.