ಹಲಸಿನಕಾಯಿ ಹಪ್ಪಳ 

ಹಲಸಿನ ಕಾಯಿನಲ್ಲಿ ತಯಾರಿಸುವ ಹಲಸಿನ ಹಪ್ಪಳ ಸವಿಯಲು ಬಹು ರುಚಿ. ಹಲಸಿನ ಹಪ್ಪಳ ಮಲೆನಾಡಿನ ಮತ್ತು ಇತರೆ ಪ್ರದೇಶಗಳಲ್ಲಿ ಹಲಸಿನ ಕಾಯಿ ಬಿಡುವ ಸೀಸನ್ ನಲ್ಲಿ ತಯಾರಿಸುವ ಹಪ್ಪಳ ವಾಗಿದೆ. ಈ ಹಪ್ಪಳವೂ ತಿನ್ನಲು ರುಚಿಕರವಾಗಿರುತ್ತೆ.

ಮಲೆನಾಡಿನಲ್ಲಿ ಹಲಸಿನ ಹಣ್ಣಿನ ಸಮಯ ಬಂತು ಎಂದರೆ ಹಲಸಿನ ಹಪ್ಪಳ ಮಾಡದವರ ಮನೆಯೇ ಇಲ್ಲ. ಹಲಸಿನ ಹಪ್ಪಳ ಮಾಡಲು ಮೊದಲು ಹಣ್ಣಾದ ಹಲಸಿನ ಕಾಯಿ ಕತ್ತರಿಸಿ ಅದರಲ್ಲಿ ಇರುವ ಸೊಳೆಗಳನ್ನು ಬಿಡಿಸಬೇಕು. ನಂತರ ಸೊಳೆಯಲ್ಲಿ ಇರುವ ಬೀಜಗಳನ್ನು ಬಿಡಿಸಿ ಬೇಯಿಸಿಕೊಳ್ಳಬೇಕು. ಬಿಡಿಸಿದ ಸೊಳೆಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಬೇಕು ಮತ್ತು ಅದಕ್ಕೆ ಜೀರಿಗೆ ಮತ್ತು ಎಳ್ಳನ್ನು, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಒಂದು ಹದದಲ್ಲಿ ರುಬ್ಬಬೇಕು. ಅದಕ್ಕೆ ಸ್ವಲ್ಪ ಅಕ್ಕಿ ಹಿಟ್ಟನ್ನು ಸೇರಿಸಿ ರುಬ್ಬಿಕೊಳ್ಳಬೇಕು ನಂತರ ರುಬಿನ ಹಿಟ್ಟನ್ನು ಉಂಡೆಗಳಾಗಿ ಮಾಡಿಕೊಳ್ಳಬೇಕು ನಂತರ ಲಟ್ಟ್ಟಣಿಗೆಯಿಂದ ಲಟ್ಟಿಸಿ ಬಿಸಿಲಿನಲ್ಲಿ ಒಣಗಿಸಬೇಕು.