ಸೋಮೇಶ್ವರ ದೇವಸ್ಥಾನ ಡಂಬಳ

ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯವು ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ದೇವಾಲಯವಾಗಿದೆ. ಈ ದೇವಾಲಯವನ್ನು ಚಾಲುಕ್ಯರು 1080 A.D ನಲ್ಲಿ ನಿರ್ಮಿಸಿದ ದೇವಾಲಯಲಾಗಿದೆ. ಈ ದೇವಾಲಯವು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಡಂಬಳದಲ್ಲಿರುವ 11ನೇ ಶತಮಾನದ ಪಶ್ಚಿಮ ಚಾಲುಕ್ಯರಿಂದ ನಿರ್ಮಿಸಿದ ವಾಸ್ತುಶಿಲ್ಪದ ದೇವಾಲಯವಾಗಿದೆ ಮತ್ತು ದೇವಸ್ಥಾನವು ಡಂಬಳ ಗ್ರಾಮದ ಹೊರವಲಯದಲ್ಲಿ ಪಕ್ಕದಲ್ಲಿದೆ. ಇದು ಚಾಲುಕ್ಯರ ಪುಣ್ಯಕ್ಷೇತ್ರ. ಕರ್ನಾಟಕದ ಸಾಂಸ್ಕೃತಿಕ ವಾಸ್ತುಶಿಲ್ಪದ ಅವಿಭಾಜ್ಯ ಅಂಗವಾಗಿದೆ ಹಾಗೂ ಶತಮಾನಗಳ ಇತಿಹಾಸವನ್ನು ಹೊಂದಿದೆ.

ಈ ದೇವಾಲಯವು ಬೆಂಗಳೂರಿನಿಂದ 404 ಕಿ.ಮೀ ಮತ್ತು ಹುಬ್ಬಳ್ಳಿ ನಗರ ದಿಂದ 80 ಕಿ.ಮೀ ದೂರದಲ್ಲಿದೆ. ಹಾಗೂ ಗದಗ ನಗರದಿಂದ 21 ಕಿ.ಮೀ ಮತ್ತು ಗದಗ ರೈಲ್ವೆ ನಿಲ್ದಾಣದಿಂದ 23 ಕಿ.ಮೀ ದೂರದಲ್ಲಿದೆ.

ಈ ದೇವಾಲಯವನ್ನು ಬೆಳ್ಳಿಗ್ಗೆ 08:00 ರಿಂದ ಮಧ್ಯಾಹ್ನ 12ರವರೆಗೆ ಮತ್ತು ಸಂಜೆ 05:00 ರಿಂದ ರಾತ್ರಿ 8:30 ರವರೆಗೆ ತೆರೆದಿರುತ್ತದೆ.

ಈ ದೇವಸ್ಥಾನವನ್ನು ಧರ್ಮೇಶ್ವರ ದೇವಸ್ಥಾನ ಎಂದೂ ಸಹ ಕರೆಯಲಾಗುತ್ತದೆ. ಇದು ಡಂಬಳ ದೊಡ್ಡಬಸಪ್ಪ ದೇವಸ್ಥಾನದ ಹತ್ತಿರವಿದೆ ಮತ್ತು ಇದು ಸಂರಕ್ಷಿತ ತಾಣವಾಗಿದೆ. ಈ ದೇವಾಲಯವು ಚಾಲುಕ್ಯರ ಶ್ರೇಷ್ಠ ವಿನ್ಯಾಸವಾಗಿದೆ, ಇದು ವಿಶಾಲವಾದ ಕಂಬದ ಸಭಾ ಮಂಟಪ ವನ್ನು ಹೊಂದಿದೆ. ಮಧ್ಯದಲ್ಲಿ ನೃತ್ಯ ಮಂಟಪದ ವೇದಿಕೆ, ಸಭಾಮಂಟಪ ಮತ್ತು ಗರ್ಭಗುಡಿಯನ್ನು ಸಂಪರ್ಕಿಸುತ್ತದೆ.

ಸೋಮೇಶ್ವರ ದೇವಾಲಯದ ಬಾಹ್ಯ ನೋಟವು ಸರಳವಾಗಿ ಕಂಡರೂ, ಉತ್ತಮವಾಗಿ ಗಟ್ಟಿಯಾದ ಗೋಡೆಗಳಿಂದ ನಿರ್ಮಿಸಲಾದ ದೇವಾಲಯ. ಕಂಬದ ಮತ್ತು ಗೋಡೆಗಳ ಚಿತ್ರದ ಸೂಕ್ಷ್ಮತೆಯು ತನ್ನದೇ ಆದ ಸೌಂದರ್ಯವನ್ನು ಹೊಂದಿದೆ. ದೇವಾಲಯವು ಪೂರ್ವ-ಪಶ್ಚಿಮಾಭಿಮುಖವಾಗಿ ನಿರ್ಮಿಸಲಾಗಿದೆ. ಸಭಾ ಮಂಟಪದ ಸುತ್ತಲಿನ ಮೇಲ್ಛಾವಣಿಯಿಂದ ಪರಿಣಾಮಕಾರಿಯಾಗಿ ನಿರ್ಮಿಸಿದ್ದು ಮಳೆನೀರನ್ನು ಹೊರಹರಿಯಲು ಸುಂದರವಾಗಿ ನಿರ್ಮಿಸಿದೆ. ಇದು ಒಳ ಸೋರಿಕೆಯನ್ನು ತಡೆಯುತ್ತದೆ.

ದೇವಾಲಯವು ಸರಳವಾದ ಹೊರ ಗೋಡೆಗಳನ್ನು ಹೊಂದಿರುವ ಪೆಟ್ಟಿಗೆಯಂತಹ ದೇವಾಲಯವಾಗಿದೆ. ದೇವಾಲಯವು ಮೂರು ಪ್ರವೇಶದ್ವಾರಗಳನ್ನು ಹೊಂದಿದೆ. ಇಲ್ಲಿ ಸಭಾ ಮಂಟಪದಲ್ಲಿರುವ ಕಂಬಗಳ ಕರಕುಶಲ, ಸುಖಾನಾಸಿ ವೇದಿಕೆಗೆ ಜೋಡಿಸಲಾದ ಹೊರಗಿನ ಕಂಬಗಳು ಅರ್ಧ ಕಂಬಗಳಾಗಿವೆ. ಈ ಭವ್ಯವಾದ ದೇವಾಲಯದ ಸಭಾಮಂಟಪವು ನೃತ್ಯ ಮಂಟಪದ 04 ಕಂಬಗಳು ಸೇರಿದಂತೆ ಸುಮಾರು 30 ಕಂಬಗಳನ್ನು ಹೊಂದಿದೆ. ಕಂಬದ ಗೋಡೆಗಳ ಸೂಕ್ಷ್ಮತೆಯು ತನ್ನದೇ ಆದ ಸೌಂದರ್ಯವನ್ನು ಹೊಂದಿದೆ. ಈ ದೇವಾಲಯದ ದೇವರು ಶಿವನ ರೂಪವಾದ ಸೋಮೇಶ್ವರ.

ಇದು ತೆರೆದ ರಂಗ-ಮಂಟಪ ಅನ್ನು ಸಹ ಒಳಗೊಂಡಿದೆ, ಗಮನಾರ್ಹವಾದ ಕಂಬಗಳನ್ನು 11 ನೇ ಶತಮಾನದ ಶ್ರೀಕರ ಮತ್ತು ಭದ್ರಕ ಶೈಲಿಗಳಲ್ಲಿ ಚೆನ್ನಾಗಿ ಕೆತ್ತಲಾಗಿದೆ. ದೇವಾಲಯವು ಹೊರನೋಟಕ್ಕೆ ನೋಡುವಂತೆ ಸರಳವಾಗಿ ಕಾಣುತ್ತದೆ, ಅದರ ಭವ್ಯತೆ ಮತ್ತು ಸೌಂದರ್ಯ ಅದರ ಒಳಭಾಗದಲ್ಲಿದೆ. ದೇವಾಲಯವು ಪ್ರಕೃತಿ ಮತ್ತು ಸಮಯದ ಶಕ್ತಿಗಳಿಂದ ಉಳಿದುಕೊಂಡಿದೆ.

ಭೇಟಿ ನೀಡಿ
ಮುಂಡರಗಿ ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ಗದಗ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು