ಸರ್ವೇಶ್ವರ ದೇವಸ್ಥಾನ ನರೇಗಲ್ಲ

ಸರ್ವೇಶ್ವರ ದೇವಸ್ಥಾನವು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಹಾನಗಲ್ಲ (ಹಾನಗಲ್) ತಾಲ್ಲೂಕಿನ ನರೇಗಲ್ಲ ಎಂಬ ಹಳ್ಳಿಯಲ್ಲಿ ಇರುವ ಪುರಾತನ ದೇವಾಲಯವಾಗಿದೆ. ಶಿವನಿಗೆ ಸಮರ್ಪಿತವಾಗಿರುವ ಈ ದೇವಾಲಯವು 11ನೇ ಶತಮಾನದ ಕಲ್ಯಾಣ ಚಾಲುಕ್ಯರ ವಾಸ್ತುಶಿಲ್ಪದ ಉತ್ತಮ ಉದಾಹರಣೆಯಾಗಿದೆ.

ನರೇಗಲ್ಲ ಸರ್ವೇಶ್ವರ ದೇವಸ್ಥಾನದ ದೂರಗಳು

  • ಬೆಂಗಳೂರು – 351 ಕಿ.ಮೀ
  • ಹಾವೇರಿ – 20 ಕಿ.ಮೀ
  • ಹಾನಗಲ್ – 25 ಕಿ.ಮೀ
  • ಹಾವೇರಿ ರೈಲ್ವೆ ನಿಲ್ದಾಣ – 21 ಕಿ.ಮೀ

ಕಲ್ಯಾಣ ಚಾಲುಕ್ಯರ ಶೈಲಿಯ ಈ ದೇವಾಲಯವು ಕ್ರಿ.ಶ. ಸುಮಾರು 11–12ನೇ ಶತಮಾನಕ್ಕೆ ಸೇರಿದ್ದು, ಪೂರ್ವಾಭಿಮುಖವಾಗಿ ನಿರ್ಮಿಸಲಾಗಿದೆ. ದೇವಾಲಯದ ತಳವಿನ್ಯಾಸದಲ್ಲಿ ಗರ್ಭಗೃಹ, ಅಂತರಾಳ ಮತ್ತು ತೆರೆದ ಸಭಾಮಂಟಪಗಳು ಸೇರಿವೆ.

ಗರ್ಭಗೃಹದಲ್ಲಿ ಶಿವಲಿಂಗವಿದ್ದು, ಅದರ ದ್ವಾರದ ಲಲಾಟಭಾಗದಲ್ಲಿ ಗಜಲಕ್ಷ್ಮಿಯ ಶಿಲ್ಪ ಕಾಣಸಿಗುತ್ತದೆ. ಅಂತರಾಳದ ದ್ವಾರದ ಲಲಾಟಭಾಗದಲ್ಲಿ ಬ್ರಹ್ಮ, ಮಹೇಶ್ವರ ಮತ್ತು ವಿಷ್ಣುವಿನ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಬಾಗಿಲಿನ ಬದಿಗಳಲ್ಲಿ ಜಾಲರಿಗಳೂ ಇವೆ.

ಆಯತಾಕಾರದ ಸಭಾಮಂಟಪವು ಕಕ್ಷಾಸನದಿಂದ ಕೂಡಿದ್ದು, ಅದರ ಚಾವಣೆಯು ಎರಡು ಕಡೆ ದೀರ್ಘ ಇಳಿಜಾರಿನಿಂದ ರೂಪುಗೊಂಡಿದೆ. ಈ ರಚನೆ ಹಂಚಿನ ಮನೆಯ ಚಾವಣಿಯನ್ನು ಹೋಲುತ್ತದೆ. ಈ ರೀತಿಯ ನಿರ್ಮಾಣದಲ್ಲಿ ಸ್ಥಳೀಯ ಶೈಲಿಯನ್ನು ಅಳವಡಿಸಿಕೊಂಡಿರುವುದು ಗಮನಾರ್ಹವಾಗಿದೆ.

ನೆಲದಲ್ಲಿ ಉದ್ದಕ್ಕೂ ಮೂರು ಶಿಲಾವೇದಿಕೆಗಳಿದ್ದು, ದೇವಾಲಯವನ್ನು ಉತ್ತರ, ದಕ್ಷಿಣ ಮತ್ತು ಪೂರ್ವ ದಿಕ್ಕುಗಳಿಂದ ಪ್ರವೇಶಿಸಬಹುದು. ಅಧಿಷ್ಠಾನದ ಪೂರ್ವ ಪ್ರವೇಶದ್ವಾರದವರೆಗೆ ಇರುವ ತೆರೆದ ಸಭಾಮಂಟಪದ ಇಳಿಜಾರು ಚಾವಣಿ ರಚನೆ ವಿಶೇಷವಾಗಿದೆ. ಸಭಾಮಂಟಪದ ಆಗ್ನೇಯ ತುದಿಯಲ್ಲಿ ಸುಮಾರು ನಾಲ್ಕು ಅಡಿ ಎತ್ತರದ ಸರಸ್ವತಿಯ ಸುಂದರ ಶಿಲ್ಪವಿದೆ. ಗರ್ಭಗೃಹದ ಮೇಲ್ಭಾಗವನ್ನು ಕದಂಬ ಶೈಲಿಯ ಶಿಖರ ಅಲಂಕರಿಸಿದೆ.

ಸಭಾಮಂಟಪದ ತೊಲೆಗಳಲ್ಲಿ ಕಂಡುಬರುವ ಶಾಸನಗಳು ಮೂಲಸ್ಥಾನ ದೇವರಿಗೆ ನೀಡಿದ ದತ್ತಿ ಹಾಗೂ ಸೂರ್ಯ ದೇವಾಲಯದ ನಿರ್ಮಾಣ ಮತ್ತು ದಾನದ ಕುರಿತು ಮಾಹಿತಿ ನೀಡುತ್ತವೆ. ಹೊರಗಿನ ಶಾಸನದಲ್ಲಿ ನರೇಗಲ್ಲದಲ್ಲಿ ಈಶ್ವರ ದೇವಾಲಯವನ್ನು ನಿರ್ಮಿಸಿದ ಕುರಿತು ಉಲ್ಲೇಖವಿದೆ.

ಭೇಟಿ ನೀಡಿ
ಹಾನಗಲ್ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಹಾವೇರಿ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section