ರಾಯಚೂರು ಕೋಟೆ

ಕರ್ನಾಟಕದ ರಾಜ್ಯದ ರಾಯಚೂರು ಜಿಲ್ಲೆಯ ಹೃದಯಭಾಗದ ಬೆಟ್ಟದ ಮೇಲೆ ಇರುವ ಕೋಟೆಯೇ ಈ ರಾಯಚೂರು ಕೋಟೆ. ಈ ಕೋಟೆಯು ಅಲ್ಲಿರುವ ಹಲವು ಭಾಷೆಗಳ, ವಿವಿಧ ಬಗೆಯ ಶಾಸನಗಳಿಗೆ ಹೆಸರುವಾಸಿಯಾಗಿದೆ. ಈ ಕೋಟೆಯಲ್ಲಿ ಹಲವು 12ನೇ ಶತಮಾನದ 95 ಗ್ರಾನೈಟಿನ ಚೆಂಡುಗಳು ಹಾಗು ಒಂದು ಫಿರಂಗಿ ದೊರೆತಿವೆ.

ಈ ಕೋಟೆಯು ಬೆಂಗಳೂರಿನಿಂದ ಸುಮಾರು 412 ಕಿ.ಮೀ ಮತ್ತು ರಾಯಚೂರು ನಿಂದ ಕೇವಲ 3 ಕಿ.ಮೀ ದೂರದಲ್ಲಿದೆ.

ಇತಿಹಾಸ

ಬಾದಾಮಿಯ ಚಾಲುಕ್ಯರ ಕಾಲದಿಂದಲೂ ಇಲ್ಲಿ ಕೋಟೆಯು ಅಸ್ತಿತ್ವದಲ್ಲಿದ್ದು, ಕಲ್ಯಾಣಿ ಚಾಲುಕ್ಯರ ಆಳ್ವಿಕೆಯಲ್ಲಿ ಈ ಕೋಟೆಯನ್ನು ನವೀಕರಿಸಲಾಯಿತು. ಈಗಿರುವ ಕೋಟೆಯನ್ನು ಕ್ರಿ.ಶ. 1294ರಲ್ಲಿ ಕಾಕತೀಯರ ಆಳ್ವಿಕೆಯಲ್ಲಿ ನಿರ್ಮಾಣ ಮಾಡಲಾಯಿತು. ಇಲ್ಲಿರುವ ಒಂದು ಶಾಸನದ ಪ್ರಕಾರ ಈ ಕೋಟೆಯನ್ನು ರಾಣಿ ರುದ್ರಮ್ಮದೇವಿಯವರ ಮಂತ್ರಿಯಾದ ರಾಜ ಗೋರೆ ಗಂಗಯ್ಯ ರಡ್ಡಿವಾರುರವರ ಆದೇಶದಂತೆ ರಾಜ ವಿಠಲನು ನಿರ್ಮಿಸಿದನೆಂದು ಉಲ್ಲೇಖವಿದೆ.

ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಸಂದರ್ಭದಲ್ಲಿ, ತಮ್ಮದೊಂದು ವಿಜಯಾಚರಣೆಯ ಸಂಭ್ರಮದಲ್ಲಿ ಕೃಷ್ಣದೇವರಾಯನು ಈ ಕೋಟೆಯ ಉತ್ತರದ ಪ್ರವೇಶದ್ವಾರವನ್ನು ನಿರ್ಮಿಸಿದನು.

ಭೇಟಿ ನೀಡಿ
ರಾಯಚೂರು ತಾಲ್ಲೂಕು ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ರಾಯಚೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು