ದೇವದುರ್ಗವು 500 ವರ್ಷಗಳಷ್ಟು ಹಳೆಯದಾದ ಬಾಬಾಬ್ ಮರಕ್ಕೆ ಪ್ರಸಿದ್ಧವಾಗಿದೆ. ದೇವದುರ್ಗವು ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಒಂದು ಪಟ್ಟಣ ಮತ್ತು ತಾಲ್ಲೂಕು ಕೇಂದ್ರವಾಗಿದೆ. ಭಾರತದಲ್ಲಿ ಬೆರಳೆಣಿಕೆಯಷ್ಟು ಬಾಬಾಬ್ ಮರಗಳಿವೆ ಮತ್ತು ಇನ್ನೂ ಒಂದು ಬಾಬಾಬ್ ಮರ ಹಾವೇರಿ ಜಿಲ್ಲೆಯ ಸವಣೂರಿನಲ್ಲಿದೆ.
ಈ ಸ್ಥಳವು ಬೆಂಗಳೂರಿನಿಂದ ಸುಮಾರು 472 ಕಿ.ಮೀ ಮತ್ತು ರಾಯಚೂರುನಿಂದ 60 ಕಿ.ಮೀ ದೂರದಲ್ಲಿದೆ. ಹಾಗೂ ದೇವದುರ್ಗ ನಗರದಿಂದ ಕೇವಲ 1.6 ಕಿ.ಮೀ ದೂರದಲ್ಲಿದೆ.
ಸರ್ಕಾರಿ ಕಾಲೇಜು ಮೈದಾನದಲ್ಲಿರುವ ಈ ಮರವು ಸುಮಾರು 500 ವರ್ಷಗಳಷ್ಟು ಹಳೆಯದು. ಈ ಮರದ 45 ಅಡಿ ಅಗಲ ಮತ್ತು 40 ಅಡಿ ಎತ್ತರವಿದೆ. ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ ಪ್ರಕಾರ, ಈ ಮರವು ಭೂಮಿಯ ಮೇಲಿನ ಅತ್ಯಂತ ಹಳೆಯ ಮರಗಳಲ್ಲಿ ಒಂದಾಗಿದೆ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸಾಮಾನ್ಯವಾಗಿ ಈ ಜಾತಿಯ ಮರಗಳು ಕಂಡುಬರುತ್ತದೆ.
ಭೇಟಿ ನೀಡಿ