ಗುಂಡಲಬಂಡಿ ಜಲಪಾತ

ಗುಂಡಲಬಂಡಿ ಜಲಪಾತವು ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಇರುವ ಒಂದು ಜಲಪಾತವಾಗಿದೆ. ಸುಮಾರು 85 ರಿಂದ 95 ಅಡಿಗಳ ಮೇಲಿಂದ ಬೃಹತ್ ಕಲ್ಲು ಬಂಡೆಗಳ ಮೇಲೆ ನೀರಿನ ಝರಿ ಹರಿಯುವ ಮನಮೋಹಕ ನೋಟ ಅನೇಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಕಲ್ಲು ಗುಡ್ಡಗಳ ಮೇಲಿಂದ ನೀರು ಬೀಳುವ ಪರಿಣಾಮ ಇದಕ್ಕೆ ಸ್ಧಳಿಯರು ಗುಂಡಲಬಂಡಿ ಜಲಪಾತ ಎಂದು ಕರೆಯುತ್ತಾರೆ.

ಈ ಜಲಪಾತವು ಬೆಂಗಳೂರಿನಿಂದ 507 ಕಿ.ಮೀ ಮತ್ತು ರಾಯಚೂರು ನಗರದಿಂದ 95 ಕಿ.ಮೀ ದೂರದಲ್ಲಿದೆ. ಹಾಗೂ ಇದು ತಿಂಟಣಿ ಸೇತುವೆಯಿಂದ 03 ಕಿ.ಮೀ ದೂರದಲ್ಲಿ ತಿಂಟಣಿ ಎಂಬ ಪ್ರದೇಶದ ಬಳಿ ಇದೆ.

ಜಲಪಾತದ ತುದಿಯ ಆರಂಭದಲ್ಲಿ ಕಲ್ಲು ಬಂಡೆಗಳ ಮೂಲಕ ಬೀಳುವ ನೀರು ಕವಲೋಡೆಯುತ್ತದೆ ನಂತರ ನಾನಾ ಕಡೆಯಲ್ಲಿ ಹರಿದು ಮುಂಭಾಗದಲ್ಲಿರುವ ಬೃಹತ್ ಮಡುಗು ಸೇರುತ್ತದೆ. ಜಲಪಾತವು ಸುತ್ತಲಿರುವ ಬೆಟ್ಟಕ್ಕಿಂತ ಎತ್ತರದ ಪ್ರದೇಶದಲ್ಲಿರುವುದರಿಂದ ಗೋಲಪಲ್ಲಿ ಗ್ರಾಮದಿಂದ ನೋಡಿದರೆ ಸೊಗಸಾಗಿ ಕಾಣುತ್ತದೆ, ರಾಷ್ಠೀಯ ಹೆದ್ದಾರಿ ಹೆದ್ದಾರಿಯಲ್ಲಿ ತೆರಳುವ ಅನೇಕರು ಜಲಪಾತವನ್ನು ಕಂಡು ಸುಂದರ ಜಲಪಾತಕ್ಕೆ ಭೇಟಿ ನೀಡುತ್ತಾರೆ.

ಭೇಟಿ ನೀಡಿ
ಲಿಂಗಸುಗೂರು ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ರಾಯಚೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು