ರಾಜಲಬಂಡಾ ಅಣೆಕಟ್ಟುವು ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದ ಸಮೀಪದಲ್ಲಿರುವ ರಾಜಲಬಂಡಾ ಹಳ್ಳಿಯಲ್ಲಿ ನಿರ್ಮಿಸಲಾದ ಪ್ರಮುಖ ಜಲಸಂರಚನೆಯಾಗಿದೆ. ಈ ಅಣೆಕಟ್ಟು ತುಂಗಭದ್ರಾ ನದಿಯ ದಡದಲ್ಲಿದ್ದು, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಗಡಿಭಾಗದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.
ರಾಜಲಬಂಡಾ ಅಣೆಕಟ್ಟು ಒಂದು ಚೆಕ್ ಡ್ಯಾಮ್ ಆಗಿದ್ದು, ಪ್ರವಾಸಿಗರ ನೆಚ್ಚಿನ ತಾಣವಾಗಿ ಪ್ರಸಿದ್ಧಿಯಾಗಿದೆ. ಈ ಅಣೆಕಟ್ಟಿನಲ್ಲಿ 31 ಅಡಿ ಎತ್ತರ ಮತ್ತು 2,690 ಮೀಟರ್ ಉದ್ದದ ತಡೆಗೋಡೆಯನ್ನು ನಿರ್ಮಿಸಲಾಗಿದೆ.
ರಾಜಲಬಂಡಾ ಅಣೆಕಟ್ಟಿನ ದೂರಗಳು
- ಬೆಂಗಳೂರು – 418 ಕಿ.ಮೀ
- ರಾಯಚೂರು – 47 ಕಿ.ಮೀ
- ಮಾನ್ವಿ – 25 ಕಿ.ಮೀ
- ರಾಯಚೂರು ರೈಲ್ವೆ ನಿಲ್ದಾಣ – 48 ಕಿ.ಮೀ
ರಾಜಲಬಂಡಾ ಅಣೆಕಟ್ಟುವನ್ನು 1946ರಲ್ಲಿ ನಿರ್ಮಿಸಲು ಪ್ರಾರಂಭಿಸಲಾಗಿದ್ದು, 1958ರಲ್ಲಿ ಸಂಪೂರ್ಣವಾಗಿ ಪೂರ್ಣಗೊಳಿಸಲಾಯಿತು. ಆ ಕಾಲದಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಅಣೆಕಟ್ಟನ್ನು ನಿರ್ಮಿಸಲಾಯಿತು. ಈ ಅಣೆಕಟ್ಟು ಸುಮಾರು 87,500 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುತ್ತದೆ.
ರಜಾದಿನಗಳು ಹಾಗೂ ಪ್ರತಿ ಭಾನುವಾರ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.
ಭೇಟಿ ನೀಡಿ










